ಮಡಿಕೇರಿ : ಭಾಗಮಂಡಲಿದಲ್ಲಿರುವ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಜಿಲ್ಲಾ ಪ್ರಮುಖರು ಕೋಟ್ಯಾಂತರ ರೂಪಾಯಿಗಳ ಹಗರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಟ, ಜೇನು ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಘದ ಸದಸ್ಯರೇ ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಇಲ್ಲಿಯವರೆಗೆ ತನಿಖೆ ಆರಂಭಗೊಂಡಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಸ್ಥಳೀಯ ಶಾಸಕರು. ಹಾಗೂ ಬಿಜಿಪಿಯಿಂದ ನಡೆಯುತ್ತಿದೆ. ಎನ್ನುವ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದರು. ಚಿಕ್ಕಮಂಗಳೂರು ಜಿಲ್ಲೆಯ ತೀರ್ಥಹಳ್ಳಿಯ ಸಂಸ್ಥೆಯೊಂದರಿಂದ ಒಂದು ಕೆ.ಜಿ ಜೇನಿಗೆ ಕೇವಲ ರೂ.60 ರಂತೆ ಲಕ್ಷಾಂತರ ಕೆಜಿ ಖರೀದಿ ಮಾಡಲಾಗಿದೆ. ಕಡಿಮೆ ಬೆಲೆಯ ದ್ರಾವಣ ಶುದ್ಧ ಜೇನಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಕೊಡಗಿನ ಜೇನಿನ ಹೆಗ್ಗಳಿಕೆಯನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿದರು.
ಹಗರಣ ಮುಚ್ಚಿ ಹೋದರೆ ಅದಕ್ಕೆ ಸರ್ಕಾರವೇ ನೇರಹೊಣೆ ಎಂದು ತಿಳಿಸಿದ ಧರ್ಮಜ ತನಿಖೆಯನ್ನು ಚುರುಕುಗೊಳಿಸದಿದ್ದರೆ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಸಹಕಾರ ಕ್ಷೇತ್ರದ ಇತಿಹಾಸದಲ್ಲೇ ಇದೊಂದು ದೊಡ್ಡ ಹಗರಣವಾಗಿದ್ದು, ಶಾಸಕರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲವೆಂದು ರಮಾನಾಥ್ ಪ್ರಶ್ನಿಸಿದರು. ವಕ್ತಾರ ತೆನ್ನಿರ ಮೈನಾ ಹಗರಣದ ಆರೋಪ ಎದುರಿಸುತ್ತಿರುವ ಜೇನು ಕೃಷಿಕರ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರಕಾಶ್‍ಕುದ್ಪಾಜಿ,ಹರ್ಷ ಹಾಗೂ ಕೇಟೋಳಿ ಮೋಹನ್ ರಾಜ್ ಭಾಗಿ.