ಮಡಿಕೇರಿ : ಮಡಿಕೇರಿಯ ಪ್ರಸಿದ್ಧ ವಿಜಯ ವಿನಾಯಕ ದೇವಾಲಯದ 24ನೇ ವಾರ್ಷಿಕ ಮಹೋತ್ಸವ ಶೃದ್ದಾ ಭಕ್ತಿಯಿಂದ ನೆರವೇರಿತು.
ದೇವಾಲಯದ ಪ್ರಧಾನ ಅರ್ಚಕ ಶ್ರೀ ಕೃಷ್ಣ ಉಪಾಧ್ಯಾಯ ಅವರಿಂದ ವಿಶೇಷ ಪೂಜೆ, ಹೋಮ ನೆರವೇರಿತು. ಮಧ್ಯಾಹ್ನ ಶ್ರೀ ವಿಜಯ ವಿನಾಯಕನಿಗೆ ಮಹಾ ಮಂಗಳಾರತಿ ಭಕ್ತರ ಭಕ್ತಿಭಾವದ ನಡುವೆ ನೆರವೇರಿತು. ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ ಸಂತರ್ಪಣೆ ನಡೆಯಿತು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಬಿ. ಪೂಣಚ್ಚ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ್, ನಗರಸಭೆ ಸದಸ್ಯರು ಸೇರಿದಂತೆ ಹಲವು ಗಣ್ಯರು ಆಗಮಿಸಿ ದೇವರ ದರ್ಶನ ಪಡೆದು ಆನ್ನ ಪ್ರಸಾದ ಸ್ವೀಕರಿಸಿದರು.