ಮುಂಬೈ: ಮುಂಬೈನ ಮಹಿಳೆಯೊಬ್ಬರು ದೀಪಾವಳಿಗೆಂದು ಆನ್‌ಲೈನ್‌ನಲ್ಲಿ ಸಿಹಿತಿಂಡಿಗಳನ್ನು ಆರ್ಡರ್ ಮಾಡಿ 2.4 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಮಹಿಳೆ ಆನ್‌ಲೈನ್‌ನಲ್ಲಿ ಕಂಡುಕೊಂಡ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ಸಂದರ್ಭ ಖದೀಮರು ಮಹಿಳೆಯ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು OTP ಅನ್ನು ಹಂಚಿಕೊಳ್ಳುವಂತೆ ಹೇಳಿದ್ದಾರೆ. ಇದರಂತೆ ಆ ಮಹಿಳೆ ತನ್ನ ಓಟಿಪಿ ಮತ್ತು ಕಾರ್ಡ್ ಸಂಖ್ಯೆ ಹಂಚಿಕೊಂಡ ತಕ್ಷಣವೇ ಆಕೆಯ ಅಕೌಂಟ್‌ನಿಂದ 2.4 ಲಕ್ಷ ರೂಪಾಯಿ ಹಣ ಕಟ್ ಆಗಿದೆ.
ತಕ್ಷಣ ಎಚ್ಚೆತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ತ್ವರಿತ ಕ್ರಮ ಕೈಗೊಂಡ ಪೊಲೀಸರು ಕಳೆದುಹೋದ ಹೆಚ್ಚಿನ ಮೊತ್ತದ ಹಣ ಬೇರೆ ಅಕೌಂಟ್‌ಗಳಿಗೆ ವರ್ಗಾವಣೆ ಮಾಡದಂತೆ ತಡೆದು ಹಣವನ್ನು ಮರುಪಾವತಿ ಮಾಡಿಸಿದ್ದಾರೆಂದು ಮಹಿಳೆ ಹೇಳಿದ್ದಾರೆ.
ಆನ್‌ಲೈನ್ ಮೂಲಕ ಯಾವುದೇ ಆರ್ಡ್‌ರ್ ಮಾಡುವ ಸಂದರ್ಭ ಈ ರೀತಿಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಇರುವುದು ಸೂಕ್ತ, ಹಾಗೇನಾದರೂ ಮೋಸ ಹೋದರೆ ತಕ್ಷಣವೇ ಸಮೀಪದ ಪೋಲಿಸ್ ಠಾಣೆಗೆ ದೂರು ನೀಡಿದರೆ ಹಣ ಬೇರೆ ಅಕೌಂಟ್‌ಗಳಿಗೆ ವರ್ಗಾವಣೆಯಾಗದಂತೆ ತಡೆಯಬಹುದು.