ಮಡಿಕೇರಿ : ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ಪುರಾತನ ಕಾಲದ ಅಂದಾಜು 700 ವರ್ಷ ಹಿಂದಿನ ಶಿವ ದೇವಾಲಯ ಒಂದು ಪತ್ತೆಯಾಗಿದೆ. ದೇವಾಲಯ ಸಂಪೂರ್ಣ ಕುಸಿದು ಬಿದ್ದ ಸ್ಥಿತಿಯಲ್ಲಿದ್ದು, ಹಿಂದಿನ ಕಾಲದ ಕೆಂಪು ಕಲ್ಲಿನಿಂದ ನಿರ್ಮಾಣ ವಾಗಿರುವುದು ಕಂಡು ಬಂದಿದೆ. ವಿರಾಜಪೇಟೆ ತಾಲೂಕಿನ ಕಡಂಗ ಪಾರಾಣೆ ರಸ್ತೆಯಲ್ಲಿರುವ ಅಂಚೆ ಕಂಚೇರಿಯ ಹಿಂಭಾಗ ಈ ದೇವಾಲಯ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಮತ್ತೆ ದೇವಾಲಯದ ಸುತ್ತಲು ಬೆಳೆದು ನಿಂತಿದ್ದ ಕಾಡನ್ನು ಕಡಿದು ಸ್ವಚ್ಚಗೊಳಿಸಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಬಲಿಪೀಠ, ಕಳಸ, ಮುಖಮಂಟಪ, ಗರ್ಭಗುಡಿ, ಮತ್ತು ದೇವಾಲಯದ ಆವರಣದಲ್ಲಿರುವ ಬಾವಿಯಲ್ಲಿ ಕಲ್ಲಿನಲ್ಲಿ ಕೆತ್ತಿರುವ ಶಿವಲಿಂಗ ಒಂದು ಪತ್ತೆಯಾಗಿದೆ. ಕೂಡ ದೇವಾಲಯದಲ್ಲಿ ದೇವರ ಆಯುಧ(ಕಡ್ತಲೆ) ಸಣ್ಣ ಗಣಪತಿ ವಿಗ್ರಹಗಳು ಪತ್ತೆಯಾಗಿವೆ.