ವಿರಾಜಪೇಟೆ : ತಮಿಳುನಾಡಿನ ಕೊಯಂಬತ್ತೂರುವಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೊಡಗು ಜಿಲ್ಲಾ ತಂಡವು ಎಲ್ಲಾ ಅಯಾಮದಲ್ಲಿ ವಿಶೀಷ್ಟ ಸಾಧನೆಗೈದು ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅಂತರ್ ರಾಷ್ಟ್ರೀಯ ಮೇಬುಕನ್ ಗೋಜೋ ರಿಯೋ ಕರಾಟೆ ಡು ಅಸೋಶಿಯೆಷನ್ ಓಕಿನೋವ ಜಪಾನ್, ಕರಾಟೆ ಇಂಡಿಯಾ ಆರ್ಗನೈಸೇಷನ್ ಎಷೀಯನ್ ಕರಾಟೆ ಡು ಫೆಡರೇಷನ್ ಮತ್ತು ವಿಶ್ವ ಕರಾಟೆ ಡು ಫೆಡರೇಷನ್ ಸಂಸ್ಥೆಗಳ ವತಿಯಿಂದ 15ನೇ ವರ್ಷದ ಐ.ಎಂ.ಜಿ.ಕೆ.ಎ. ಇಂಡಿಯಾ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಶಿಪ್ 2022 ತಮಿಳುನಾಡಿನ ಕೊಯಂಬತ್ತೂರಿನ ಸುಲೂರು ಶ್ರೀ ಸೆಂಥೀಲ್ ಆಂಡವರ್ ಮಂಟಪದಲ್ಲಿ ಕರಾಟೆ ಕ್ರೀಡಾಕೂಟವು ಅಯೋಜಿಸಲಾಗಿತ್ತು.
ಕರಾಟೆ ಕ್ರೀಡಾಕೂಟದಲ್ಲಿ ಗೋಜೋ ರಿಯೋ ಕರಾಟೆ ತರಬೇತಿ ಶಾಲೆ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಕಥಾ ಮತ್ತು ಕುಮಿತೆ ವಿಭಾಗದಲ್ಲಿ ವಿಧ್ಯಾರ್ಥಿಗಳು ತಮ್ಮ ಅಮೊಘ ಪ್ರತಿಬೆಯನ್ನು ಪ್ರದರ್ಶನ ಮಾಡಿ. ಒಟ್ಟು 24 ಚಿನ್ನದ ಪದಕಗಳು, 11 ಬೆಳ್ಳಿಯ ಪದಕಗಳು ಮತ್ತು 13 ಕಂಚಿನ ಪದಕಗಳನ್ನು ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ತನ್ನಾದಾಗಿಸಿಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ಜಿಲ್ಲಾ ತಂಡಕ್ಕೆ ಸೆನ್ಸಾಯಿ ಎಂ.ಬಿ ಚಂದ್ರನ್ ಅವರು ತರಬೇತಿ ನೀಡಿರುತ್ತಾರೆ. ವಿಧ್ಯಾರ್ಥಿಗಳ ಈ ಅಮೋಘ ಸಾಧನೆಗೆ ಜಿಲ್ಲೆಯ ಜನತೆಯು ಮೆಚ್ಚುಗೆ ವ್ಯಕ್ತಪಡಿಸಿದೆ.