Breaking News
   
   
   

ಗ್ರಾಮ ಪಂಚಾಯತ್‌ ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ ; ದೂರು ದಾಖಲು

ಕೊಡಗು

news-details

7ನೇ ಹೊಸಕೋಟೆ: ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆ ಸಂದರ್ಭ ಗ್ರಾಮ ಪಂಚಾಯತ್‌  ಸದಸ್ಯ ಅಧ್ಯಕ್ಷನ ಮೇಲೆ ಹಲ್ಲೆಗೆ ಮುಂದಾಗಿ ಕೈಮಾಡಿದ ಘಟನೆ ಕೊಡಗಿನ 7ನೇ ಹೊಸಕೋಟೆ ಗ್ರಾಮ ಪಂಚಾಯತ್‌ ನಲ್ಲಿ ಗುರುವಾರ ನಡೆದಿದೆ.
 ಕೆರೆ ಜಾಗದಲ್ಲಿ ಸ್ಮಶಾನ ನಿರ್ಮಿಸುವ ವಿಚಾರವಾಗಿ ಉಂಟಾದ ಚರ್ಚೆ ಸಂದರ್ಭ ಸದಸ್ಯ ಮುಸ್ತಫಾ ಅಧ್ಯಕ್ಷ ರಮೇಶ್ ಮೇಲೆ ಹಲ್ಲೆಗೆ ಮುಂದಾಗಿ ಮೈಮೇಲೆ ಕೈ ಮಾಡಿದ್ದಾರೆ ಎನ್ನಲಾಗಿದ್ದು ಈ ದೃಶ್ಯ ಸಿಸಿ ಕ್ಯಾಮೆರದಲ್ಲಿ ದಾಖಲಾಗಿದೆ. 
 ಈ ಹಿನ್ನಲೆ ಅಧ್ಯಕ್ಷ ರಮೇಶ್‌ ದೂರಿನ ಮೇರೆಗೆ ಸದಸ್ಯ ಮುಸ್ತಫಾ ಮೇಲೆ ಸುಂಟಿಕೊಪ್ಪ  ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾಮ ಪಂಚಾಯತ್‌ ಸದಸ್ಯನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ 100ಕ್ಕೂ ಹೆಚ್ಚು ಬಿಜೆಪಿಯ ಪ್ರಮುಖರು ಪೊಲೀಸ್‌ ಠಾಣೆ ಮುಂಭಾಗ ಜಮಾಯಿಸಿ ಸದಸ್ಯ ಮುಸ್ತಫಾವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.  ಈ ಸಂರ‍್ಭ ಬಿಜೆಪಿ ಪ್ರಮುಖರಾದ ಬಿ.ಬಿ ಭಾರತೀಶ್, ಡಾ.ಶಶಿಕಾಂತ್ರೈ, ದಾಸಂಡ ರಮೇಶ್, ಹೇರೂರು ಚಂದ್ರಶೇಖರ್, ಗೌತಮ್‌ ಮತ್ತು ಹೊಸಕೋಟೆ ಗ್ರಾಮ ಪಂಚಾಯತ್‌ನ ಬಿಜೆಪಿ ಸದಸ್ಯರು ಇದ್ದರು. 
 

news-details