ಕುಶಾಲನಗರ : ಬೆಳ್ಳಂಬೆಳಗ್ಗೆ ಕುಶಾಲನಗರದ ಎರಡು ಸ್ಥಳಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ಮಾದಾಪಟ್ಟಣದಲ್ಲಿನ ಪೊಲೀಸ್ ಅಧಿಕಾರಿ ಮಹೇಶ್ ಮತ್ತು ಕುಶಾಲನಗರ ಬೈಚನಹಳ್ಳಿಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ರಫೀಕ್, ಮನೆ ಮತ್ತು ರಫೀಕ್ ಮಾವ ಮತ್ತು ತಂದೆ ಮನೆಯನ್ನು ಪರಿಶೀಲನೆ ನಡೆಸಿ ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಮಡಿಕೇರಿಯ 50 ಮಂದಿ ತಂಡ ಪರಿಶೀಲನೆ ಕೈಗೊಂಡಿದ್ದು ತನಿಖೆ ಕೈಗೊಂಡಿರುವುದಾಗಿ ತಿಳಿದು ಬಂದಿದೆ.