Breaking News
   
   
   

ಕರ್ನಾಟಕ ಯೂತ್ ವೇಲ್ಪೆರ್ ಅಸೊಷಿಯೇಷನ್ ಹಾಗೂ ರಿಯಾಲಿಟಿ ಬುಕ್ ಆಫ್ ವರ್ಡ್ ರೆಕಾರ್ಡ್ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ  ಕೊಡಗಿನ ಮಹಿಳೆ  ಕಾವ್ಯ ರವರಿಗೆ ಡಾ || ಪುನೀತ್ ರಾಜಕುಮಾರ್ ಕಲಾರತ್ನ ಸೇವಾ ಪ್ರಶಸ್ತಿ 

ಕೊಡಗು

news-details

ಸಂಗೀತ ಗಾನ ಲಹರಿ (ರಿ)
ಕರ್ನಾಟಕ ಯೂತ್ ವೇಲ್ಪೆರ್ ಅಸೊಷಿಯೇಷನ್ ಹಾಗೂ ರಿಯಾಲಿಟಿ ಬುಕ್ ಆಫ್ ವರ್ಡ್ ರೆಕಾರ್ಡ್ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ 

ಕೊಡಗಿನ ಮಹಿಳೆ  ಕಾವ್ಯ ರವರಿಗೆ ಡಾ || ಪುನೀತ್ ರಾಜಕುಮಾರ್ ಕಲಾರತ್ನ ಸೇವಾ ಪ್ರಶಸ್ತಿ 


 ಮೀಸಸ್ ಇಂಡಿಯಾ ಕರ್ವಿ ವಿಜೇತೆ, ಸಮಾಜ ಸೇವಕಿ ಶ್ರೀಮತಿ ಕೊಣಿಯಂಡ ಕಾವ್ಯ ಸಂಜು ರವರಿಗೆ ಶಿವಮೊಗ್ಗ ದ ಸಂಗೀತ ಗಾನ ಲಹರಿ ಸಂಸ್ಥೆ ಯಿಂದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿ ಡಾ :ಪುನೀತ್ ರಾಜಕುಮಾರ್ ಕಲಾ ರತ್ನ ಸೇವಾ ಪ್ರಶಸ್ತಿ -2024ಯನ್ನು ಪಡೆದು ಕೊಂಡಿದ್ದಾರೆ.

ಇವರು ಕೊಡಗಿನಲ್ಲಿ ಬಾರಿ ಮಳೆಯಿಂದ  ಮನೆಗಳಿಗೆ ಹಾನಿಯುoಟಾದ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ ಸಹಾಯ ಹಸ್ತ ನೀಡಿದ್ದಾರೆ,ಕರೋನ ಸಂದರ್ಭದಲ್ಲಿ ಸ್ವಯಂ ಪ್ರೇರಣಾ ಬಳಗದ ವತಿಯಿಂದ ಸಾವಿರಾರು ಜನರಿಗೆ ಉಪಯೋಗವಾಗುವಂತೆ ದಿನಸಿ ಕಿಟ್ ಹಾಗೂ ರಕ್ತದಾನ ಶಿಬಿರ, ಸಸಿಗಳನ್ನು ನೆಡುವ,ಹಾಗೂ ನೇತ್ರದಾನ, ದೇಹ ದಾನಗಳoತಹ ಮಹತ್ವ ದ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿ ಕೊಂಡು ಬಂದಿರುವ ಇವರು ಜೆ ಸಿ ಐ ಸಂಸ್ಥೆ ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ  ಸಮಾಜಮುಖಿ ಕೆಲಸ ಗಳಲ್ಲಿ ತಮ್ಮನ್ನು ತಾವುಗಳು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ  ಪೋಮ್ಮಕ್ಕಡ ಕೂಟ ಕೊಡವ ಸಮಾಜ, ಪೊನ್ನoಪೇಟೆ  ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತರುವ ಇವರಿಗೆ ಅನೇಕ ಸಂಘ ಸಂಸ್ಥೆ ಗಳು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಹಾಗೂ ಸನ್ಮಾನ ಗಳನ್ನು ಮಾಡಿವೆ, ಈಗ ಮತ್ತೊಮ್ಮೆ ಇವರ ಸಾಮಾಜಿಕ ಸೇವೆ ಹಾಗೂ ಸಾಧನೆ ಯನ್ನು ಗುರುತಿಸಿ ಶಿವಮೊಗ್ಗದ ಗಾನಲಹರಿ ಸಂಸ್ಥೆ ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಇವರಿಗೆ ಪುನೀತ್ ರಾಜಕುಮಾರ್ ಕಲಾ ರತ್ನ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಹಿಸಿದೆ.

news-details