Breaking News
   
   
   

ಶ್ರೀಮಂಗಲ ಹೋಬಳಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಜಾನುವಾರು ಹಂತಕ ಹುಲಿಸೆರೆಗೆ ಎರಡನೇ ದಿನದ ಕಾರ್ಯಾಚರಣೆ-

ಕೊಡಗು

news-details

ಶ್ರೀಮಂಗಲ:ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿಯನ್ನು ಸೆರೆಹಿಡಿಯಲು ಶ್ರೀಮಂಗಲ ಹೋಬಳಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಹುಲಿ ಸುಳಿವು ಪತ್ತೆಯಾಗಿಲ್ಲ. ಸೋಮವಾರ ಮತ್ತೊಂದು ಬೋನ್ ಇರಿಸಲಾಗಿದೆ. ಎರಡು ದಿನದ ಕಾರ್ಯಾಚರಣೆಯಲ್ಲಿ ಕಾಡು ಹಂದಿಯನ್ನು ದಾಳಿ ನಡೆಸಿ ಕೊಂದು ಕೆಲವು ಭಾಗವನ್ನು ತಿಂದಿರುವುದು ಪತ್ತೆಯಾಗಿದೆ. ಆದ್ದರಿಂದ ಹುಲಿ ಸುತ್ತಮುತ್ತಲಿನಲ್ಲಿ ಇರುವ ಸಾಧ್ಯತೆ ಇರುವುದರಿಂದ ಹಂದಿ ಮೇಲೆ ದಾಳಿ ನಡೆಸಿರುವ ಜಾಗದಲ್ಲಿ ಮತ್ತೊಂದು ಬೋನ್ ಇರಿಸಿ ಹುಲಿ ಸರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿರುವ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ತಿಳಿಸಿದ್ದಾರೆ. ಈಗಾಗಲೇ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹಸುವನ್ನು ಕೊಂದಿರುವ ಜಾಗದಲ್ಲಿ ಒಂದು ಬೋನನ್ನು ಇರಿಸಲಾಗಿದೆ. ಇನ್ನೊಂದು ಬೋನನ್ನು ಸೋಮವಾರ ಇರಿಸಲಾಗುತ್ತಿದೆ ಎಂದು ಸಂಕೇತ್ ಪೂವಯ್ಯ ಅವರು ತಿಳಿಸಿದರು. ಸ್ಥಳದಲ್ಲಿ ಮತ್ತಿಗೋಡು ಸಾಕಾನೆ ಶಿಬಿರದಿಂದ ಶ್ರೀರಾಮ ಮತ್ತು ಅಜಯ ಎಂಬ ಎರಡು ಸಾಕಾನೆಗಳನ್ನು ಕರೆತರಲಾಗಿದೆ. ಕಾಫಿ ತೋಟದ ನಡುವೆ  ಬೆಳೆ ನಷ್ಟವಾಗುವ ಮುನ್ನೆಚ್ಚರಿಕೆಯಿಂದ ಸಾಡಾನೆಗಳನ್ನು ಬಳಸುತ್ತಿಲ್ಲ. ಹುಲಿಯ ಸುಳಿವು ಸಿಕ್ಕಿದರೆ ತಕ್ಷಣವೇ ಕಾಡಾನೆಗಳನ್ನು ಬಳಸಲು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.  ಈಗಾಗಲೇ ಕಾರ್ಯಾಚರಣೆಗೆ ೬೦ ಜನ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಒಂದುವರೆಯಿAದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆದಿದೆ. ಇದುವರೆಗೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಕ್ಷಿಪ್ರ ಕಾರ್ಯಪಡೆ ಹಾಗೂ ಕಾಡಾನೆ ಟಾಸ್ಕ್ ಪೊರ್ಸ್ ಗಳ ತಂಡವನ್ನು ಬಳಸಿಕೊಳ್ಳಲಾಗಿದೆ.  ಮಾನವನ ಮೇಲೆ ಹುಲಿ ದಾಳಿ ಆಗುವ ಅಪಾಯದ ಮುನ್ನೆಚ್ಚರಿಕೆಯಿಂದ ಮತ್ತು ಹುಲಿ ರಾಷ್ಟ್ರೀಯ ಪ್ರಾಣಿ ಆಗಿರುವುದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ, ವನ್ಯಜೀವಿ ವಿಭಾಗದ ಪಿಸಿಸಿಎಫ್ ಪುಷ್ಕರ್ ಅವರ ಗಮನ ಸೆಳೆದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಅರವಳಿಕೆ ನೀಡಿ ಹುಲಿ  ಸೆರೆ ಹಿಡಿಯುವ ಅನುಮತಿಯನ್ನು ಈಗಾಗಲೇ ಮಂಜೂರು ಮಾಡಿಸಿದ್ದಾರೆ ಎಂದು ಈ ಸಂದರ್ಭ ಸಂಕೇತ್ ಪೂವಯ್ಯ ಅವರು ತಿಳಿಸಿದರು. ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪಂಚಾಯ್ತಿ  ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು ಸುಬ್ಬಯ್ಯ, ವಿವಿಧ ಸಂಘ ಸಂಸ್ಥೆಯ ಪ್ರಮುಖರಾದ ಮಾಣೀರ ವಿಜಯನಂಜಪ್ಪ, ಚೊಟ್ಟೆಯಾಂಡಮಾಡ ವಿಶು, ಉದಯ, ಕಾಳಿಮಾಡ ಪ್ರಶಾಂತ್, ಅಪ್ಪಚಂಗಡ ಮೋಟಯ್ಯ, ಇಟ್ಟಿರ ಭವಿನ್, ಮಾಣೀರ ಉಮೇಶ್, ಚಂಗುಲAಡ ಸೂರಜ್, ಪರಮಲೆ ಗಣೇಶ್, ಮಾಣೀರ ಬೆಳ್ಳಿಯಪ್ಪ, ಪೊಕ್ಕಲಂಗಡ ಕಾಶಿ ಹಾಜರಿದ್ದರು. ಸ್ಥಳದಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್ ನೆಹರು, ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ಎಸಿಎಫ್ ಗೋಪಾಲ್, ಮಡಿಕೇರಿ ಎಸಿಎಫ್ ಶ್ರೀನಿವಾಸ್ ನಾಯಕ್, ಶ್ರೀಮಂಗಲ ಆರ್.ಎಫ್.ಓ ಅರವಿಂದ್, ಪೊನ್ನಂಪೇಟೆ ಆರ್.ಎಫ್.ಓ , ಶಂಕರ್ ಹಾಗೂ ಅರವಳಿಕೆ ತಜ್ಞ ಡಾ. ಚಿಟ್ಟಿಯಪ್ಪ, ಶಾರ್ಪ್ ಶೂಪರ್ ರಂಜನ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.

news-details