Breaking News
   
   
   

ಜಿಮ್ನ್ಯಾಸ್ಟಿಕ್‌ಗೆ ದೀಪಾ ಕರ್ಮಾಕರ್ ವಿದಾಯ

ಕ್ರೀಡೆ

news-details

ನವದೆಹಲಿ: ಅಸಾಧಾರಣ ಪ್ರದರ್ಶನದ ಮೂಲಕ ದೇಶದ ಗಮನಸೆಳೆದಿದ್ದ ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸೋಮವಾರ ಕ್ರೀಡೆಯಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.

31 ವರ್ಷದ ಅಥ್ಲೀಟ್ ದೀಪಾ ಈ ಭಾವನಾತ್ಮಕ ಸುದ್ದಿಯನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯ ಮೂಲಕ ಬಹಿರಂಗಪಡಿಸಿದ್ದಾರೆ.

ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಮತ್ತು ಭಾರತೀಯ ಜಿಮ್ನಾಸ್ಟಿಕ್ಸ್ ಅನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಸಾಹಸದೊಂದಿಗೆ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ.

ಮ್ಯಾಟ್‌ನಿಂದ ಹೊರಹೋಗುತ್ತಿದ್ದೇನೆ! ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು. ಮುಂದಿನ ಅಧ್ಯಾಯಕ್ಕೆ ಕಾತರಳಾಗಿದ್ದೇನೆ ಎಂದು ಅವರು ತಮ್ಮ ನಿವೃತ್ತಿಯ ಪ್ರಕಟಣೆಯ ಜತೆ Instagram ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತನ್ನ ಭಾವುಕ ಪೋಸ್ಟ್‌ನಲ್ಲಿ, ದೀಪಾ ಕನಸುಗಳನ್ನು ಹೊಂದಿರುವ ಚಿಕ್ಕ ಹುಡುಗಿಯಿಂದ ಪ್ರಸಿದ್ಧ ಕ್ರೀಡಾಪಟುವಿನವರೆಗೆ ತನ್ನ ಪ್ರಯಾಣವನ್ನು ತಿಳಿಸಿಕೊಟ್ಟಿದ್ದಾರೆ. ಐದು ವರ್ಷದ ದೀಪಾಗೆ ತನ್ನ ಚಪ್ಪಟೆ ಪಾದದಿಂದಾಗಿ ಜಿಮ್ನಾಸ್ಟ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದು ನನಗೆ ಇನ್ನೂ ನೆನಪಿದೆ ಎಂದು ಅವರು ಬರೆದಿದ್ದಾರೆ. ಆದರೆ ಇಂದು ನನ್ನ ಸಾಧನೆಗಳನ್ನು ನೋಡಿ ಹೆಮ್ಮೆಪಡುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ತ್ರಿಪುರಾದ ಅಗರ್ತಲಾದಲ್ಲಿ ಜನಿಸಿದ ಕರ್ಮಾಕರ್ ಅವರು ತಮ್ಮ ಚಲ ಮನೋಭಾವ ಹಾಗೂ ಅದಮ್ಯ ಉತ್ಸಾಹದ ಕಾರಣಕ್ಕಾಗಿಯೇ ಗುರುತಿಸಲ್ಪಟ್ಟಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ದೀಪಾ ಎಂಬ ಇತಿಹಾಸ ನಿರ್ಮಿಸಿದರು. 2016 ರ ರಿಯೊ ಗೇಮ್ಸ್‌ನಲ್ಲಿ, ವಾಲ್ಟ್ ಈವೆಂಟ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಲ್ಲದೆ, ಕೂದಲೆಳೆಯ ಅಂತರದಲ್ಲಿ ಪದಕ ವೇದಿಕೆಯನ್ನು ತಪ್ಪಿಸಿಕೊಂಡಿದ್ದರು. ಅದರಲ್ಲೂ ಜಿಮ್ನಾಸ್ಟಿಕ್ಸ್‌ನಲ್ಲಿ ಅತ್ಯಂತ ಕಷ್ಟಕರವಾದ ಪ್ರೊಡುನೋವಾ ವಾಲ್ಟ್‌ ವ್ಯಾಪಕ ಮೆಚ್ಚುಗೆ ಗಳಿಸಿತ್ತು.

news-details