Breaking News
   
   
   

ಅಂತರ ರಾಷ್ಟ್ರೀಯ ಡ್ರಗ್ಸ್ ಮಾರಾಟ ಜಾಲ ಭೇದಿಸಿದ ಪೊಲೀಸರು-ಏಳು ಮಂದಿ ಆರೋಪಿಗಳ ಬಂಧನ

ಕೊಡಗು

news-details

ಮಡಿಕೇರಿ
=========================
ಥೈಲ್ಯಾಂಡ್ ದೇಶದಿಂದ ಕೊಡಗಿನ ಗೋಣಿಕೊಪ್ಪಕ್ಕೆ ‘ಹೈಡ್ರೋ  ಗಾಂಜಾ’ ಸಾಗಿಸಿ ಅದನ್ನು ಮತ್ತೆ ದುಬೈಗೆ ಸಾಗಿಸಲು ಪ್ರಯತ್ನಿಸುತ್ತಿದ್ದ ಅಂತರ ರಾಷ್ಟ್ರೀಯ ಡ್ರಗ್ಸ್ ಮಾರಾಟ ಜಾಲವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಪೊಲೀಸರು, ಕೊಡಗು ಸೇರಿದಂತೆ ನೆರೆಯ ಕೇರಳ ರಾಜ್ಯದ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 3 ಕೋಟಿ ರೂಪಾಯಗಳ  ಮೌಲ್ಯದ 3 ಕೆ.ಜಿ. 31 ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ವಿರಾಜಪೇಟೆ ಹೆಗ್ಗಳ ಗ್ರಾಮ ನಿವಾಸಿ ನಾಸಿರುದ್ದೀನ್ ಎಂ.ಯು., ಎಡಪಾಲ ನಿವಾಸಿ ಯಾಹ್ಯ ಸಿ.ಹೆಚ್., ಕುಂಜಿಲ ಗ್ರಾಮದ ಅಕನಾಸ್, ಬೇಟೋಳಿ ಗ್ರಾಮದ ವಾಜಿದ್, ಕೇರಳ ಕಣ್ಣೂರಿನ ರಿಯಾಝ್, ಮೂಲತಃ ಆರ್ಜಿ ಗ್ರಾಮದ ಬೆಂಗಳೂರಿನ ಸಂಜಯ್ ನಗರದಲ್ಲಿ ವಾಸವಿದ್ದ ರವೂಫ್,  ಕಾಸರಗೋಡು ನಿವಾಸಿ ಪ್ರಕರಣದ ಪ್ರಮುಖ ಆರೋಪಿ ಮೆಹರೂಫ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಇದೊಂದು ಅಪರೂಪ ಪ್ರಕರಣವಾಗಿದ್ದು ಹೈಡೋ ಗಾಂಜಾ ಎಂಬುವುದು ಸಾಮಾನ್ಯ ಗಾಂಜಾಕ್ಕಿAತ ನಶೆಯನ್ನು ಕೊಡುವ ಮಾದಕ ದ್ರವ್ಯವಾಗಿದ್ದು, ದುಬಾರಿ ಬೆಲೆ ಹೊಂದಿದೆ. ಹೈಡೋ ಗಾಂಜಾ ವಿಭಿನ್ನ ರೀತಿಯ ಕೃತಕ ಬೆಳಕನ್ನು ಉಪಯೋಗಿಸಿ ಹಾಗೂ ಹವಾನಿಯಂತ್ರಿತ ಕೊಠಡಿಯಲ್ಲಿ ಬೆಳೆಯಲಾಗುತ್ತದೆ ಎಂದು ವಿವರಿಸಿದರು. ಈ ಹೈಡೋ ಗಾಂಜಾವನ್ನು ಪ್ರಕರಣದ ಪ್ರಮುಖ ಆರೋಪಿಯ ನಿರ್ದೇಶನದ ಮೇರೆಗೆ ಕೊಡಗಿನ ಮೂಲಕ ದುಬೈಗೆ ಸಾಗಿಸಲು ಪ್ರಯತ್ನ ಮಾಡುತ್ತಿದ್ದ ಸಂದರ್ಭ ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಈ ಹೈಡೋ ಗಾಂಜಾವನ್ನು ಪ್ರತಿಷ್ಠಿತ ಪಾರ್ಟಿಗಳಲ್ಲಿ ಮಾತ್ರವೇ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಪ್ರಕರಣವನ್ನು ಬೇಧಿಸಲು ಸತತ 72 ಗಂಟೆಗಳ ಕಾಲ ಶ್ರಮ ವಹಿಸಲಾಗಿದೆ. ಇದೀಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿರುವುದಾಗಿ ಎಸ್.ಪಿ. ರಾಮರಾಜನ್ ಹೇಳಿದರು. ದೂರದ ಥೈಲ್ಯಾಂಡ್ ದೇಶದಲ್ಲಿದ್ದುಕೊಂಡು ಅಂತರ ರಾಷ್ಟ್ರೀಯ ಡ್ರಗ್ಸ್ ಜಾಲ ಹೊಂದಿದ್ದ ಕೇರಳ ಮೂಲದ ಮಹಮ್ಮದ್ ಅನೂಫ್ ಎಂಬಾತನನ್ನು ಕೂಡ ಬಂಧಿಸಲಾಗುತ್ತದೆ ಎಂದು ಕೆ.ರಾಮರಾಜನ್ ವಿಶ್ವಾಸ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಪಿ.ಕೆ., ಮಡಿಕೇರಿ ಗ್ರಾಮಾಂತರ ವೃತ್ತನಿರೀಕ್ಷಕ ಅನೂಪ್ ಮಾದಪ್ಪ, ಅಪರಾಧ ಪತ್ತೆ ದಳದ ವೃತ್ತನಿರೀಕ್ಷಕ ಮೇದಪ್ಪ, ಸಿಬ್ಬಂದಿಗಳಾದ ಯೋಗೇಶ್, ಪ್ರಭಾಕರ್, ರಾಜೇಶ್, ನಿರಂಜನ್, ನಗರ ಠಾಣಾಧಿಕಾರಿ ಲೋಕೇಶ್, ಡಿಸಿಆರ್‌ಬಿ ಘಟಕದ ರವಿಕುಮಾರ್, ಮುರುಳಿ, ಶರತ್ ರೈ ಅವರುಗಳು ಕಾರ್ಯಾಚರಣೇ ನಡೆಸಿದ್ದಾರೆ. ಅಪರೂಪದ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
ಟಿವಿ ಒನ್ ನ್ಯೂಸ್, ಮಡಿಕೇರಿ 
 

news-details