ದಕ್ಷಿಣ ಏಷ್ಯನ್ ದಾಖಲೆ ಬೊಳ್ಳಂಡ ಉನ್ನತಿ ಅಯ್ಯಪ್ಪರವರಿಗೆ ಮತ್ತೊಂದು ಚಿನ್ನದ ಪದಕ
ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್ ಶಿಪ್ ಬುಧವಾರದಿಂದ ಚೆನ್ನೈನಲ್ಲಿ ಆರಂಭಗೊಂಡಿದ್ದು. ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಮೊನ್ನೆ ಚಿನ್ನದ ಪದಕ 100 ಮೀಟರ್ ಹರ್ಡಲ್ಸ್ ನಲ್ಲಿ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು.
ಇಂದು 200 ಮೀಟರ್ ಅನ್ನು 23.91 ಕ್ರಮಾಂಕದಲ್ಲಿ ಮುಗಿಸಿ ಚಿನ್ನದ ಪದಕ ಪಡೆದಿದ್ದಾರೆ.
ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಐವರು ಭಾಗವಹಿಸಿದ್ದು ಜಿಲ್ಲೆಯ ಇಬ್ಬರು ಭಾಗವಹಿಸಿದ್ದಾರೆ.
ಮಹಿಳೆಯರ 100 ಮೀಟರ್ ಹರ್ಡಲ್ಸ್ ಹಾಗೂ 200 ಮೀಟರ್ ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಉನ್ನತಿ ಅಯ್ಯಪ್ಪ ದಕ್ಷಿಣ ಏಷ್ಯಾ ದಾಖಲೆ ನಿರ್ಮಿಸಿದ್ದಾರೆ. ರಾಷ್ಟ್ರೀಯ ಅಥ್ಲೆಟ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ದಂಪತಿಯ ಪುತ್ರಿಯಾಗಿದ್ದಾರೆ.