Breaking News
   
   
   

ಕೊಡಗಿನ ಶೆಡ್ಡಿನಲ್ಲೂ ಬೆಂಗಳೂರಿನ ಮಾದರಿಯಲ್ಲಿ ಹತ್ಯೆ ಮಾಡಲಾಯ್ತೆ?

ಕೊಡಗು

news-details

ಕೊಡಗಿನ ಶೆಡ್ಡಿನಲ್ಲೂ ಬೆಂಗಳೂರಿನ ಮಾದರಿಯಲ್ಲಿ ಹತ್ಯೆ ಮಾಡಲಾಯ್ತೆ?

 

ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಸೆಪ್ಟೆಂಬರ್ 3 ರಂದು ನೇಣುಬಿಗಿದು ಸ್ಥಿತಿಯಲ್ಲಿ ದೇವಿಪ್ರಸಾದ್ (27) ಎಂಬ ಆಟೋ ಚಾಲಕನ  ಮೃತದೇಹ ಪತ್ತೆಯಾಗಿತ್ತು. ಸದ್ಯ ಈ ಕೇಸ್​ಗೆ ಸಂಬಂಧಿಸಿದಂತೆ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತ ಯುವಕನ ಪೋಷಕರಿಂದ‌ ಪೊಲೀಸರಿಗೆ ದೂರು ನೀಡಲಾಗಿದೆ.

ಮದೆನಾಡು ಗ್ರಾಮದಲ್ಲಿ ಮೃತ ದೇವಿಪ್ರಸಾದ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಾವಿಗೂ ಮುನ್ನ ದೇವಿಪ್ರಸಾದ್ ಮೇಲೆ ಊರಿನ ಕೆಲವರಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಹಲ್ಲೆ‌ ಮಾಡಿದ ಹಲವರ ಜೊತೆ ದೇವಿಪ್ರಸಾದ್​ಗೆ ಹಿಂದಿನಿಂದಲೂ ದ್ವೇಷ ಇತ್ತು.

 

ಹಲ್ಲೆ ಬಳಿಕ ದೇವಿಪ್ರಸಾದ್​ನನ್ನು ಶೆಡ್​ನಲ್ಲಿ ನೇಣಿಗೇರಿಸಿದ್ದಾರೆ. ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪೊಷಕರಿಂದ ದೂರು ನೀಡಲಾಗಿದೆ.

news-details