Breaking News
   
   
   

*ಮದುವೆಯಾಗುವುದಾಗಿ ನಂಬಿಸಿ, ಯುವತಿಗೆ ವಂಚನೆ-ಆರೋಪಿ ಬಂಧನ*

ಕ್ರೈಮ್ ನ್ಯೂಸ್

news-details

*ಮದುವೆಯಾಗುವುದಾಗಿ ನಂಬಿಸಿ, ಯುವತಿಗೆ ವಂಚನೆ-ಆರೋಪಿ ಬಂಧನ*
ಮದುವೆಯಾಗುವುದಾಗಿ ನಂಬಿಸಿ, ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ನಿರಾಕರಿಸಿದ್ದ ಆರೋಪಿ ಬಂಧನ
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೋರ ಗ್ರಾಮದ ಗಣಪತಿ.ಕೆ.ಎಸ್(20) ಬಂಧಿತ ಆರೋಪಿ
ಅದೇ ಗ್ರಾಮದ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ಯುವತಿ ಗರ್ಭಾವತಿಯಾಗಲು ಕಾರಣವಾಗಿದ್ದ ಆರೋಪಿ
ಮದುವೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನ
ಹೆಚ್ಚಿನ ಚಿಕಿತ್ಸೆಗಾಗಿ ಯುವತಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು
ಯುವತಿಯ ಪೋಷಕರಿಂದ 12ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ
ವಿರಾಜಪೇಟೆ ಉಪವಿಭಾಗ  ಡಿಎಪಿ,  ಆರ್.ಮೋಹನ್ ಕುಮಾರ್, ವಿರಾಜಪೇಟೆ ವೃತ್ತದ ಸಿಪಿಐ, ಬಿ.ಎಸ್.ಶಿವರುದ್ರ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ,  ಮಂಜುನಾಥ, ಮತ್ತು ಸಿಬ್ಬಂದಿಗಳ ತಂಡದಿಂದ ಆ.13ರಂದು ಆರೋಪಿ ಬಂಧನ
ಬಂಧಿತ ಆರೋಪಿ ಗಣಪತಿ.ಕೆ.ಎಸ್. ನ್ಯಾಯಾಂಗ ವಶಕ್ಕೆ 
ನಿವಾಸಿಯಾದ  ಅಯ್ಯಪ್ಪ ಎಂಬುವವರ 20 ವರ್ಷ ಪ್ರಾಯದ ಮಗಳನ್ನು ಅದೇ ಗ್ರಾಮದ ನಿವಾಸಿಯಾದ ಗಣಪತಿ ಚುಮಿ ಎಂಬಾತನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿ ಯುವತಿಯನ್ನು ಗರ್ಭಾವತಿಗೊಳಿಸಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸದರಿ ಯುವತಿಯು 0 3 ತಿಂಗಳ ಗರ್ಭಿಣಿಯಾಗಿರುವ ವಿಚಾರ ತಂದೆ-ತಾಯಿಗೆ ತಿಳಿದರೆ ಬೇಸರ ಮಾಡಿಕೊಳ್ಳತ್ತಾರೆ ಎಂದು ಯುವತಿಯು ಅತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ. ಪೋಷಕರು ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ ಹಾಗೂ ಮಗಳನ್ನು ಪ್ರೀತಿಸಿ ಮದುವೆಯಗುವುದಾಗಿ ನಂದಿಸಿ ಗರ್ಭಾವತಿಗೊಳಿಸಿ ಮದುವೆಯಾಗಲು ನಿರಾಕರಿಸಿರುವ ಆತ್ಮಹತ್ಯೆಗೆ ಮಾಡಿಕೊಳ್ಳಲು ಕಾರಣವಾಗಿರುವ ಗಣಪತಿ-ಚುಮ್ಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಿನಾಂಕ್ 12-08-2024 ರಂದು ದೂರು ಸ್ವೀಕರಿಸಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 69 ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಯನ್ನು ಪತ್ತೆಗಾಗಿ ಶ್ರೀ ಆರ್.ಮೋಹನ್ ಕುಮಾರ್, ಡಿಎಪಿ, ವಿರಾಜಪೇಟೆ ಉಪವಿಭಾಗ, ಶ್ರೀ ಬಿ.ಎಸ್.ಶಿವರುದ್ರ, ಸಿಪಿಐ, ವಿರಾಜಪೇಟೆ ವೃತ್ತ ಹಾಗೂ ಶ್ರೀ ಮಂಜುನಾಥ, ಪಿಎಸ್‌ಐ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿ ಶಾಖೆ ಕೈಗೊಂಡು ದಿ: 13-08-2024 ರಂದು ತೋರ ಗ್ರಾಮದ ನಿವಾಸಿಯಾದ ಗಣಪತಿ.ಕೆ.ಎಸ್, 20 ವರ್ಷ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ
 

news-details