Breaking News
   
   
   

ನಾಪೋಕ್ಲು ಬಳಿಯ ಕೈಕಾಡು ಗ್ರಾಮದಲ್ಲಿ ನಾಲ್ಕುತಿಂಗಳ ಮಗುವನ್ನು ಬಿಟ್ಟು ತಾಯಿ ಆತ್ಮಹತ್ಯೆ 

ಕೊಡಗು

news-details

ನಾಪೋಕ್ಲು ಬಳಿಯ ಕೈಕಾಡು ಗ್ರಾಮದಲ್ಲಿ ನಾಲ್ಕುತಿಂಗಳ ಮಗುವನ್ನು ಬಿಟ್ಟು ತಾಯಿ ಆತ್ಮಹತ್ಯೆ 

ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು :ಕ್ಷುಲ್ಲಕ ಕಾರಣಕ್ಕೆ ಗೃಹಿಣಿಯೊಬ್ಬಳು ನಾಲಕ್ಕು ತಿಂಗಳ ಮಗುವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಾಪೋಕ್ಲು ಬಳಿಯ ಪಾರಾಣೆ ಕೊಣಂಜಂಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದಲ್ಲಿ ನಡೆದಿದೆ.

ಕೈಕಾಡು ಗ್ರಾಮದ ಚೊಟ್ಟೆಯಂಡ ಅರುಣ,ಸ್ವಾತಿ ದಂಪತಿಗಳ ಪುತ್ರಿ ತನೀಷ ಬೊಳ್ಳಮ್ಮ( 26) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ಕಳೆದ ಒಂದು ವರ್ಷಗಳ ಹಿಂದೆ  ವಿರಾಜಪೇಟೆ ಸಮೀಪದ ಕೊಳತ್ತೋಡು ಬೈಗೋಡು ಗ್ರಾಮದ ನಿವಾಸಿ ಕೇಳಪಂಡ ಶಿರಾಗ್ ತಮ್ಮಯ್ಯ ತನೀಷ ಬೊಳ್ಳಮ್ಮ ನಡುವೆ  ವಿವಾಹ ನಡೆದಿತ್ತು. ಗರ್ಭಿಣಿಯಾಗಿದ್ದ  ತನೀಷ ಕಳೆದ 7ತಿಂಗಳಿಂದ ಕೈಕಾಡಿನಲ್ಲಿರುವ ತನ್ನ ತವರು ಮನೆಯಲ್ಲಿ ಇದ್ದಳು. ಕಳೆದ 4ತಿಂಗಳ  ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ತನೀಷ  ಮನೆಯಲ್ಲಿ ಮಗುವಿನ ಹಾರೈಕೆಯಲ್ಲಿ ತೊಡಗಿದ್ದರು. ಪ್ರತಿದಿನ ಮನೆಯಲ್ಲಿ ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮಗಳಿಗೆ ತಾಯಿ ಸ್ವಾತಿ ಹಾಗೂ ತಂದೆ ಅರುಣ ಅವರು ಬೋಬೈಲ್ ಬಳಕೆಯಿಂದ ನಿನಗೂ ಮಗುವಿಗು ತೊಂದರೆಯಾಗುತ್ತದೆ ಎಂದು  ಮಗಳಿಗೆ ಬುದ್ದಿವಾದ ಹೇಳಿದ್ದಾರೆ.ಇದಕ್ಕೆ ಮನನೊಂದ ತನೀಷ ಬೊಳ್ಳಮ್ಮ ಮಂಗಳವಾರ ಮುಂಜಾನೆ 3ಗಂಟೆಗೆ ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 
ಪ್ರಕರಣ ಸಂಬಂಧ ಮೃತಳ ತಂದೆ ಅರುಣ ಅವರು ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 
ಸ್ಥಳಕ್ಕೆ ಮಡಿಕೇರಿ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

news-details