Breaking News
   
   
   

ಗಿನ್ನಿಸ್ ದಾಖಲೆ ಬರೆದಿರುವ ಕೊಡವ ಕುಟುಂಬಗಳ ‘ಕೌಟುಂಬಿಕ ಹಾಕಿ ಪಂದ್ಯಾವಳಿ’ ಇದೀಗ ದೆಹಲಿಯ ರಾಜ್ಯ ಸಭೆಯಲ್ಲೂ ಪ್ರಸ್ತಾಪವಾಗಿದ್ದು,

ಕೊಡಗು

news-details

ಮಡಿಕೇರಿ,ಆ.8: ಗಿನ್ನಿಸ್ ದಾಖಲೆ ಬರೆದಿರುವ ಕೊಡವ ಕುಟುಂಬಗಳ ‘ಕೌಟುಂಬಿಕ ಹಾಕಿ ಪಂದ್ಯಾವಳಿ’ ಇದೀಗ ದೆಹಲಿಯ ರಾಜ್ಯ ಸಭೆಯಲ್ಲೂ ಪ್ರಸ್ತಾಪವಾಗಿದ್ದು, ಕೇಂದ್ರದ ಮಾಜಿ ಕ್ರೀಡಾ ಸಚಿವ ಹಾಗೂ ಹಾಲಿ ರಾಜ್ಯ ಸಭಾ ಸದಸ್ಯರಾದ ಅಜಯ್ ಮಾಖನ್ ಅವರು ಕೊಡಗು ಜಿಲ್ಲೆಯಲ್ಲಿ ಉನ್ನತ ಮಟ್ಟದ ಹಾಕಿ ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಕೇಂದ್ರ ಕ್ರೀಡಾ ಸಚಿವರಿಗೆ ಮನವಿ ಮಾಡಿದ್ದಾರೆ. 
ಹಾಕಿ ಕ್ರೀಡೆಯ ತೊಟ್ಟಿಲು:
ಇಂದು ರಾಜ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ಅಜಯ್ ಮಾಖನ್ ಅವರು, ಕೊಡಗು ಜಿಲ್ಲೆ ಹಾಕಿ ಕ್ರೀಡೆಯ ತೊಟ್ಟಿಲಾಗಿದೆ. ಈ ಬಾರಿ ನಡೆದ ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಪಂದ್ಯಾವಳಿ ‘ಗಿನ್ನಿಸ್ ದಾಖಲೆ’ ಬರೆದಿದೆ. ಕೇಂದ್ರ ಸರಕಾರದ ಯಾವುದೇ ನೆರವಿಲ್ಲದೇ ಅಲ್ಲಿನ ರಾಜ್ಯ ಸರಕಾರದ ನೆರವನ್ನು ಪಡೆದುಕೊಂಡು ಈ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಇದರಿಂದ ತಾವು ಅತ್ಯಂತ ಪ್ರಭಾವಿತರಾಗಿರುವುದಾಗಿ ಅಜಯ್ ಮಾಖನ್ ಸದನದ ಗಮನ ಸೆಳೆದರು.
ವಿಶ್ವದಲ್ಲೇ ದೊಡ್ಡ ಪಂದ್ಯಾವಳಿ:
1997ರಲ್ಲಿ ಕೇವಲ 60 ತಂಡಗಳಿAದ ಆರಂಭವಾದ ಪಂದ್ಯಾವಳಿಯಲ್ಲಿ ಈ ಬಾರಿ 360 ತಂಡಗಳು ಭಾಗವಹಿಸಿ 4834 ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಕೊಡಗು ಜಿಲ್ಲೆಯಂತಹ ಸಣ್ಣ ಜಿಲ್ಲೆಯಿಂದ 50ಕ್ಕೂ ಅಧಿಕ ಆಟಗಾರರು ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದರೆ, ಎಂ.ಪಿ. ಗಣೇಶ್, ಗೋವಿಂದ, ಎಂ.ಎA. ಸೋಮಯ್ಯ ಸೇರಿದಂತೆ 7ಕ್ಕೂ ಅಧಿಕ ಹಾಕಿ ಕ್ರೀಡಾ ಪಟುಗಳು ಓಲಂಪಿಯನ್‌ಗಳಾಗಿ ರಾಷ್ಟçವನ್ನು ಪ್ರತಿನಿಧಿಸಿದ್ದಾರೆ. ವಿಶ್ವದಲ್ಲೇ ದೊಡ್ಡ ಮಟ್ಟದ ಹಾಕಿ ಕ್ರೀಡೆಯನ್ನು ಕೊಡಗು ಜಿಲ್ಲೆಯಲ್ಲಿ ಆಯೋಜಿಸಿರುವುದು ದೊಡ್ಡ ಸಾಧನೆ ಎಂದು ರಾಜ್ಯ ಸಭಾ ಸದಸ್ಯ ಅಜಯ್ ಮಾಖನ್ ಬಣ್ಣಿಸಿದರು.
ತರಬೇತಿ ಕೇಂದ್ರ ತೆರೆಯಲಿ:
ಹಾಕಿ ಕ್ರೀಡೆಗೆ ಮಹತ್ವ ನೀಡುವ ದಿಸೆಯಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಕೇಂದ್ರ ಸರಕಾರ ತನ್ನ ಸಹಕಾರ ನೆರವನ್ನು ನೀಡಬೇಕು ಎಂದು ಸದಸ್ಯ ಅಜಯ್ ಮಾಖನ್ ರಾಜ್ಯ ಸಭೆಯ ಗಮನ ಸೆಳೆದರು. ತಾವು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸಮುದ್ರ ಮಟ್ಟದಿಂದ ಎತ್ತರದ ಪ್ರದೇಶವಾದ ತಮಿಳುನಾಡಿನ ಕೂನೂರ್ ಮತ್ತು ಹಿಮಾಚಲ ಪ್ರದೇಶದಲ್ಲೂ ಹಾಕಿ ತರಬೇತಿ ಕೇಂದ್ರ ತೆರೆಯಲಾಗಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಕೊಡಗನ್ನು ಕೂಡ ಸಮುದ್ರ ಮಟ್ಟದಿಂದ ಎತ್ತರ ಪ್ರದೇಶ ಎಂದು ಪರಿಗಣಿಸಿ ಇಲ್ಲಿಯೂ ಹಾಕಿ ತರಬೇತಿ ಕೇಂದ್ರ ತೆರೆಯಬೇಕು. ಹಾಕಿ ಕ್ರೀಡೆಗೆ ಅಗತ್ಯವಾಗಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಇದರಿಂದ ನೂರಾರು ಕ್ರೀಡಾ ಪಟುಗಳು ಹೊರಬರಲು ಸಾಧ್ಯವಾಗಲಿದೆ ಎಂದು ರಾಜ್ಯ ಸಭೆಯ ಸದನದಲ್ಲಿ ಮಾಜಿ ಕ್ರೀಡಾ ಸಚಿವ ಸಂಸದ ಅಜಯ್ ಮಾಖನ್ ಕೇಂದ್ರ ಸರಕಾರದ ಕ್ರೀಡಾ ಸಚಿವರಿಗೆ ಸಲಹೆ ನೀಡಿದರು.
============


 

news-details