ಮಡಿಕೇರಿ: ಕೊಡಗಿನಲ್ಲಿ ಕಕ್ಕಡ ಪದಿನೆಟ್ರ ಸಂಭ್ರಮ ಮನೆ ಮಾಡಿದೆ. ಕೊಡಗಿನಲ್ಲಿ ಕಕ್ಕಡ ಪದಿನೆಟ್ ಒಂದು ವಿಶಿಷ್ಟ ಆಚರಣೆಯಾಗಿದೆ. ಆಗಸ್ಟ್ ೩ರಂದು ಪ್ರತಿ ಮನೆಗಳಲ್ಲೂ ಕಕ್ಕಡದ ವಿಶೇಷ ಖಾದ್ಯಗಳು ಘಮಘಮಿಸಲಿವೆ. ಕಕ್ಕಡ ಪದಿನೆಟ್ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಮದ್ದುಸೊಪ್ಪಿನ ಮಾರಾಟ ಭರ್ಜರಿಯಾಗಿ ನಡೆಯಿತು. ನಗರದ ಮುಖ್ಯ ಬೀದಿಗಳಲ್ಲಿ, ನಗರಸಭೆ ಮುಂಭಾಗ, ಕೋಟೆ ಮುಂಭಾಗ, ಬಸ್ ನಿಲ್ದಾಣ, ಚೌಕಿ ಆವರಣದಲ್ಲಿ ಮದ್ದು ಸೊಪ್ಪನ್ನು ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಆಷಾಢ ತಿಂಗಳ ಹದಿನೆಂಟರAದು ಕೊಡಗಿನಲ್ಲಿ ಕಕ್ಕಡ ೧೮ ವಿಶೇಷ ಆಚರಣೆ ನಡೆಯುತ್ತಿದ್ದು, ೧೮ ಔಷಧೀಯ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪಿನ ಪಾಯಸ ಅಥವಾ ಸೊಪ್ಪಿನಿಂದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದು ವಿಶೇಷ. ಕಕ್ಕಡ ೧೮ರಂದು ಮದ್ದುಸೊಪ್ಪಿನಲ್ಲಿ ೧೮ ವಿಧದ ಔಷಧ ಗುಣಗಳಿರುತ್ತವೆ ಎನ್ನುವುದು ಪ್ರತೀತಿ. ಇದು ಆರೋಗ್ಯಕ್ಕೆ ಪೂರಕವಾದುದು ಹಾಗೂ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎನ್ನಲಾಗುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಯಥೇಚ್ಛವಾಗಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪ್ಪು ಮಳೆ ಚಳಿ ಗಾಳಿಗೆ ಮನುಷ್ಯರ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ಮಾತ್ರವಲ್ಲ ಇವುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಹಿರಿಯರ ನಂಬಿಕೆ. ನಾಟಿ ಕೋಳಿ, ಏಡಿ, ಹೊಳೆ ಮೀನು ಕೂಡ ಕಕ್ಕಡ ತಿಂಗಳಿನಲ್ಲಿ ಮಾಂಸಹಾರಿಗಳ ದೇಹವನ್ನು ಬೆಚ್ಚಗಿಡಲು ಹಾಗೂ ಆರೋಗ್ಯ ವರ್ಧಕವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗುವ ಕೊಡಗಿನ ಕೃಷಿಕರು ಮಳೆ, ಚಳಿಗೆ ಮೈಯೊಡ್ಡಿ ದುಡಿಯುತ್ತಾರೆ. ಇದೇ ಕಾರಣಕ್ಕೆ ದೇಹವನ್ನು ಬೆಚ್ಚಗಿಡುವ ಖಾದ್ಯಗಳಿಗೆ ವಿಶೇಷ ಆದ್ಯತೆ ನೀಡುತ್ತಾ