Breaking News
   
   
   

ಹುಣಸೂರು ತಾಲೂಕಿನಾದ್ಯಂತ ಬಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ.

ಮೈಸೂರು

news-details

ಹುಣಸೂರು ತಾಲೂಕಿನಾದ್ಯಂತ ಬಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ.

ನಗರದ ಮಂಜುನಾಥ ಸಾಕೇಂತ ಬಡಾವಣೆ, ಶಬ್ಬೀರ್ ನಗರದ ಹಳ್ಳಕೊಳ್ಳ ಗಳಲ್ಲಿ ಬಾರೀ ಪ್ರಮಾಣದ ನೀರು ತುಂಬಿಕೊಂಡು ಮನೆಗಳವರು ಆತಂಕಗೊಂಡಿದ್ದಾರೆ.
ಉಯಿಗೊಂಡನಹಳ್ಳಿ, ಕರೀಮುದ್ದನಹಳ್ಳಿ, ಕಿರಂಗೂರುಗಳಲ್ಲಿ ಮನೆಗಳು ಕುಸಿದು ಬಿದ್ದಿದ್ದು. ಮನೆಯೊಳಗಿದ್ದ ಪದಾರ್ಥ ಗಳು ಮಳೆ ನೀರು  ಪಾಲಾಗಿದೆ
ಹನಗೋಡು ಹೋಬಳಿಯಲ್ಲಿ ಹೆಚ್ಚಿನ ಮಳೆಯಾಗಿದ್ದು.
 ನಗೋಡು ಪಂಚವಳ್ಳಿ ರಸ್ತೆಯ ಹೆಬ್ಬಳ್ಳ ಸೇತುವೆ ಮೇಲೆ ಬಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು. ರಸ್ತೆ ಸಂಚಾರ ಬಂದ್ ಆಗಿದೆ.
ತಾಲೂಕಿನಲ್ಲಿ ಗುರುವಾರ ಮದ್ಯಾಜ್ನ ದಿಂದ ಸುರಿಯುತ್ತಿರುವ ಮಳೆಗೆ   ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದು ಯತೇಚ್ಚವಾಗಿ ನೀರು ಹರಿಯುತ್ತಿದ್ದು. ಕೆರೆ ತಳಬಾಗದ ಜಮೀನುಗಳು ಜಲಾವೃತವಾಗಿದೆ.
ಲಕ್ಷ್ಮಣತೀರ್ಥ  ನದಿ ತುಂಬಿ ಹರಿಯುತ್ತಿದ್ದು. ನದಿ ಪಾತ್ರದ ಜಮೀನುಗಳು ಜಲಾವೃತವಾಗಿದೆ.
ಗುರುವಾರ ಶಾಲಾ ಕಾಲೇಜುಗಳು ಮದ್ಯಾಹ್ನ ರಜೆ ಘೋಷಿಸಿದ್ದರಿಂದ ಮಳೆಯಲ್ಲೇ ವಿದ್ಯಾರ್ಥಿ ಗಳು ತೆರಳುವಂತಾಗಿತ್ತು.
ಶುಕ್ರವಾರವೂ ಮಳೆ ಮುಂದುವರೆದಿದ್ದರಿಂದಾಗಿ ಪ್ರಾಥಮಿಕ. ಹಿರಿಯ ಪ್ರಾಥಮಿಕ. ಪ್ರೌಢ ಶಾಲೆ ಹಾಗೂ  ಖಾಸಗಿ ಕಾಲೇಜುಗಳಗೆ ರಜೆ ಘೋಷಿಸಲಾಗಿದೆ.
ನದಿ ಪತ್ರದ ಜನರು ಎಚ್ಚರ ವಹಿಸುವಂತೆ ತಹಸಿಒಲ್ದಾರ್ ಮಂಜುನಾಥ್ ಮನವಿ ಮಾಡಿದ್ದಾರೆ.

news-details