ನಾಪೋಕ್ಲು ವ್ಯಾಪ್ತಿಯಲ್ಲಿ ವರುಣನ ಅಬ್ಬರ-ಕಾವೇರಿ ನದಿ ಪ್ರವಾಹದ ಭೀತಿಯಲ್ಲಿ ಜನರು * ನಾಪೋಕ್ಲು ವ್ಯಾಪ್ತಿಯ ಕಾವೇರಿ ನದಿ ಪ್ರವಾಹದಲ್ಲಿ ಮತ್ತಷ್ಟು ಏರಿಕೆ.ನಾಪೋಕ್ಲು -ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಪ್ರವಾಹ ಮತ್ತಷ್ಟು ಏರಿಕೆ.*ಕೊಟ್ಟಮುಡಿ ಜಂಕ್ಷನ್ ಬಳಿಯ ಮೂರ್ನಾಡು ರಸ್ತೆವರೆಗೂ ಆವರಿಸಿದ ಕಾವೇರಿ ನದಿ ಪ್ರವಾಹ.ಮೂರ್ನಾಡು ರಸ್ತೆಯ ಬೊಳಿಬಾಣೆ ರಸ್ತೆಯಲ್ಲಿ 6ಅಡಿಯಷ್ಟು ಬಂದ ಕಾವೇರಿ ನದಿ ಪ್ರವಾಹ*ನಾಪೋಕ್ಲು ಕೊಟ್ಟಮುಡಿ ಬೆಟ್ಟಗೇರಿ ರಸ್ತೆಯಲ್ಲಿ ಪ್ರವಾಹ ಬರುವ ಸಾಧ್ಯತೆ. ಕೇವಲ 2ಅಡಿಯಷ್ಟು ನದಿ ನೀರು ಬಂದರೆ ನಾಪೋಕ್ಲು ಬೆಟ್ಟಗೇರಿ ಮಡಿಕೇರಿ ರಸ್ತೆ ಸಂಪರ್ಕ ಖಡಿತಗೊಳ್ಳುವ ಸಾಧ್ಯತೆ.*ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆಯ ಎರಡು ಕಡೆಗಳಲ್ಲಿ ರಸ್ತೆ ಸಂಪೂರ್ಣ ಜಲಾವೃತ. ಗ್ರಾಮದ ನದಿದಡದಲ್ಲಿ ವಾಸಿಸುವ ಜನರಲ್ಲಿ ಹೆಚ್ಚಿದ ಪ್ರವಾಹದ ಆತಂಕ*ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆಯಲ್ಲಿ ಮತ್ತಷ್ಟು ಏರಿಕೆ ಕಂಡ ಪ್ರವಾಹ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ*ನಾಪೋಕ್ಲು ಕೈಕಾಡು,ಪಾರಾಣೆ ರಸ್ತೆಯಲ್ಲಿರುವ ಎತ್ತುಕಡು ಹೊಳೆ ಪ್ರವಾಹ ರಸ್ತೆಗೆ ಬರಲು ಕೇವಲ ಒಂದು ಅಡಿಯಷ್ಟು ಮಾತ್ರ ಬಾಕಿಇದ್ದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ*ನಾಪೋಕ್ಲು ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆಯಿಂದ ಮಳೆ ಬಿರುಸಿಕೊಂಡಿದ್ದು ಮತ್ತಷ್ಟು ಪ್ರವಾಹ ಬಂದು ನಾಪೋಕ್ಲು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಜಲಾವೃತಗೊಂಡು ನಾಪೋಕ್ಲು ಪಟ್ಟಣ ದ್ವೀಪವಾಗುವುದರಲ್ಲಿ ಯಾವುದೇ ಸಂಶಯವಿಲ್ಲ*ಮಳೆ ಹಿನ್ನೆಲೆ ಜಿಲ್ಲಾಡಳಿತದಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಹರ್ಷ ವ್ಯಕ್ತಪಡಿಸಿದ ಮಕ್ಕಳ ಪೋಷಕರು.