Breaking News
   
   
   

*ಕೊಡಗಿನ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯ ಹಾಕಿತಂಡವು ಬೆಂಗಳೂರಿನಲ್ಲಿ ನಡೆದ 17 ವರ್ಷದೊಳಗಿನ ಸಿ ಐ ಎಸ್ ಸಿ ಇ ಪ್ರಾದೇಶಿಕ ಮಟ್ಟದ ಹಾಕಿ ಪಂದ್ಯಾಟದಲ್ಲಿ ಬೆಂಗಳೂರಿನ ಸೆಂಟ್ ಜೋಸೆಫ್ ಯುರೋಪಿಯನ್ ಶಾಲೆಯನ್ನು ಒಂದು ಸೊನ್ನೆ ಗೋಲುಗಳಿಂದ ಸೋಲಿಸಿತು*

ಕೊಡಗು

news-details

*ಕೊಡಗಿನ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯ ಹಾಕಿತಂಡವು ಬೆಂಗಳೂರಿನಲ್ಲಿ ನಡೆದ 17 ವರ್ಷದೊಳಗಿನ 
ಸಿ ಐ ಎಸ್ ಸಿ ಇ  ಪ್ರಾದೇಶಿಕ ಮಟ್ಟದ ಹಾಕಿ ಪಂದ್ಯಾಟದಲ್ಲಿ ಬೆಂಗಳೂರಿನ ಸೆಂಟ್ ಜೋಸೆಫ್ ಯುರೋಪಿಯನ್ ಶಾಲೆಯನ್ನು ಒಂದು ಸೊನ್ನೆ ಗೋಲುಗಳಿಂದ ಸೋಲಿಸಿತು*
           
ಈ ಪಂದ್ಯಾಟವು ಜುಲೈ 17ರಂದು ಬೆಂಗಳೂರಿನ ಕೆ ಎಸ್ ಎಚ್ ಎ ಹಾಕಿ ಕ್ರೀಡಾಂಗಣದಲ್ಲಿ ನಡೆಯಿತು.
 ರೋಮಾಂಚನಕಾರಿಯಾದ ಅಂತಿಮ ಪಂದ್ಯಾಟದಲ್ಲಿ ಕೂರ್ಗ್ ಪಬ್ಲಿಕ್ ಶಾಲೆಯ ಮಯಾನ್ ಮುತ್ತಣ್ಣ ಮೊದಲ ಗೋಲನ್ನು ದಾಖಲಿಸುವುದರ ಮೂಲಕ ಕಾಪ್ಸ್ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು. ಈ ಮೂಲಕ ಕಾಪ್ಸ್ ತಂಡ ಸಿ ಐ ಎಸ್ ಸಿ ಹಾಕಿ ಕಪ್ಪನ್ನು ತನ್ನದಾಗಿಸಿಕೊಂಡಿತು.
  ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ ಧನ್ಯ ಸುಬ್ಬಯ್ಯ ರವರು ತಂಡಕ್ಕೆ ಸ್ಪೂರ್ತಿ ನೀಡಲು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು
  ಕೂರ್ಗ್ ಪಬ್ಲಿಕ್ ಶಾಲೆಯ ಹಾಕಿ ತಂಡವು ಒರಿಸ್ಸಾದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದೆ.
  ಈ ಹಾಕಿ ಪಂದ್ಯಾವಳಿಯ ಅಮೋಘ ವಿಜಯಕ್ಕೆ ಕಾರಣರಾದ ದೈಹಿಕ ಶಿಕ್ಷಕರು ಹಾಗೂ ಹಾಕಿ ತರಬೇತುದಾರರಾದ  ಕೆ ಯೆನ್ ಮಿಲನ್ ಮಾಚಯ್ಯ ಹಾಗೂ ಬಿದ್ದಪ್ಪ ರವರನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ

news-details