ಕರ್ನಾಟಕ ಹಾಕಿ ತಂಡದ ಉಪನಾಯಕಿಯಾಗಿ ಕೊಡಗು ವಿದ್ಯಾಲಯ ಶಾಲೆಯ ವಿದ್ಯಾರ್ಥಿನಿ ಪರ್ಲಿನ್ ಪೊನ್ನಮ್ಮ ಆಯ್ಕೆ.
ಜೂನ್ 26ರಂದು ನಡೆದ ಹಾಕಿ ಕರ್ನಾಟಕ ಸಬ್ ಜೂನಿಯರ್ ಪುರುಷ ಹಾಗೂ ಮಹಿಳೆಯರ ಹಾಕಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ ಪೈಕಿ ನಮನ್ ಆರ್, ಆದಿತ್ಯ ದಿನಕರ್, ಚರೀಶ್ ಉತ್ತಯ್ಯ, ಪರ್ಲ್ಲಿನ್ ಪೊನ್ನಮ್ಮ, ನೀತು ಚೌದರಿ, ಜಾಸ್ಮಿನ್ ಫೆಲ್ಲಾ ಹಾಗೂ ವರ್ಣ ಬೋಜಮ್ಮ ರಾಜ್ಯ ಮಟ್ಟದ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುತ್ತಾರೆ.
ಇವರ ಪೈಕಿ ಪರ್ಲ್ಲಿನ್ ಪೊನ್ನಮ್ಮ ಇದೇ ತಿಂಗಳು 19 ರಿಂದ 26ರವರೆಗೆ ಕೊಲ್ಲಂನಲ್ಲಿ ಹಾಕಿ ಇಂಡಿಯಾ ನಡೆಯುವ ದಕ್ಷಿಣ ವಲಯ ಮಟ್ಟದ. ಹಾಕಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ಹಾಕಿ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿರುತ್ತಾಳೆ.
ಈಕೆ ಮಡಿಕೇರಿಯ ವಕೀಲರಾದ ಅಚ್ಚಪಂಡ ಗಿರಿ ಹಾಗೂ ಪದ್ಮ ದಂಪತಿ ಪುತ್ರಿ.