ಗೋಣಿಕೊಪ್ಪಲು. - ಬೀದಿ ಬದಿ ವ್ಯಾಪಾರಿಗಳ ತೆರವುಗೊಳಿಸಿದ ಪಂಚಾಯತ್ .
*
ಗೋಣಿಕೊಪ್ಪಲು ನೂತನ ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದ , ಮಾರುಕಟ್ಟೆಗೆ ಹೋಗುವ ರಸ್ತೆಯ 90 ರಷ್ಟು ಭಾಗವನ್ನು ಅತಿಕ್ರಮಿಸಿದ್ದ ಬೀದಿ ಬದಿ ವ್ಯಾಪಾರಿಗಳನ್ನು ತರೆವುಗಳಿಸಿದ ಗ್ರಾಮ ಪಂಚಾಯಿತಿ,
ಗೋಣಿಕೊಪ್ಪ. ಹಳೆಯ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಕಾರ್ಯ ಆರಂಭಿಸುವ ಮುನ್ನ ಬಸ್ ನಿಲ್ದಾಣ ಸುತ್ತ ಮುತ್ತಲಿನ ಎಲ್ಲಾ ಬೀದಿ ವ್ಯಾಪಾರಿಗಳಿಗೂ ಗೋಣಿಕೊಪ್ಪಲು ಹಳೆಯ ಗ್ರಾಮ ಪಂಚಾಯಿತಿ ಹಾಗೂ ಮಾರುಕಟ್ಟೆ ಅವರಣದಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ
ಅದರು ಇವರು ಬಸ್ ನಿಲ್ದಾಣದ ಮಾರುಕಟ್ಟೆ ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದ ಇದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗ್ರಾಮ ಪಂಚಾಯಿತಿಯ ಅಡಳಿತ ಮಂಡಳಿ ಗಮನಕ್ಕೆ ತಂದರು,
ತಕ್ಷಣವೇ ಕಾರ್ಯಪ್ರವತರಾದ ಗ್ರಾಮ ಪಂಚಾಯಿತಿ ಪ್ರಮುಖರು ಇವರನ್ನು ಅಲ್ಲಿಂದ ತೆರವುಗೊಳಿಸಿ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟರು,
ಗ್ರಾಮ ಪಂಚಾಯಿತಿ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.