ಕೊಯನಾಡು: ಶಾಲೆ ಮೇಲೆ ಬಿದ್ದ ಬರೆ, ಕ್ಲಾಸ್ ರೂಂಗಳು ಜಖಂ, ಭಾರಿ ಹಾನಿ
ಕೊಯನಾಡು ಸರ್ಕಾರಿ ಶಾಲೆ ಮೇಲೆ ಮತ್ತೆ ಬರೆ ಕುಸಿತವಾಗಿದೆ.
ಭಾರಿ ಮಳೆಗೆ ಶಾಲಾ ಕಟ್ಟಡದ ಮೇಲೆ ಬರೆ ಕುಸಿದಿದ್ದು ಭಾರಿ ಹಾನಿ ಸಂಭವಿಸಿದೆ .
ಕ್ಲಾಸ್ ರೂಂಗಳು ಜಖಂಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಳೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಣೆ ಮಾಡಿದೆ.
ಈ ಹಿಂದೆ ಹಲವು ಸಲ ಇದೇ ಶಾಲೆಯ ಮೇಲೆ ಬರೆ ಕುಸಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಶಾಲೆಯಲ್ಲಿ ಕಲಿಯುವ ಮಕ್ಕಳ ರಕ್ಷಣೆ ಬಗ್ಗೆ ಸರ್ಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಿದೆ.