Breaking News
   
   
   

ಕೇರಳದ ವೈನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ- ಹೆಚ್.ಡಿ.ಕೋಟೆಯ ಕಬಿನಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ…

ಕೊಡಗು

news-details

ಹೆಚ್.ಡಿ.ಕೋಟೆ:ಕೇರಳದ ವೈನಾಡಿನಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆಯ ಕಬಿನಿ ಜಲಾಶಯದ  ನಾಲ್ಕು  ಕ್ರಸ್ಟ್   ಗೇಟ್ ಗಳಿಂದ 15 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಕಬಿನಿ ಜಲಾಶಯಕ್ಕೆ ಒಳಹರಿವು 15 ಸಾವಿರ    ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಭದ್ರತಾ ಹಿತ ದೃಷ್ಟಿಯಿಂದ  ಜಲಾಶಯದ ಮುಂಭಾಗ ಇರುವ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ, ಸೇತುವೆ ಮೇಲೆ ಸಂಚಾರ ನಿರ್ಬಂಧ  ಮಾಡಲಾಗಿದೆ. ಹ್ಯಾಂಡ್ ಪೋಸ್ಟ್ ನಿಂದ ಬಿದರಹಳ್ಳಿ, ಬಸಾಪುರ, ತೆರಣಿ ಮಂಟಿ,  ಎನ್. ಬೇಗೂರು, ಬೀರಂಬಳ್ಳಿ, ಕಡೆಗೆ ತೆರಳುವ ಸಾರ್ವಜನಿಕರಿಗೆ  ಮಾತ್ರ ದ್ವಿಚಕ್ರವಾಹನದಲ್ಲಿ ಜಲಾಶಯದ ಅಣೆಕಟ್ಟಿನ ಮೇಲೆ ತೆರಳುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಟಿವಿ ಒನ್‌ನೊಂದಿಗೆ ಮಾತನಾಡಿದ ಕಬಿನಿ ಸಹಾಯಕ ಕಾರ್ಯಪಾಲಕ ಅಭಿಯಂತರದ ಗಣೇಶ್, ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗುತ್ತಿದ್ದು, ಜಲಾಶಯದಿಂದ  ನದಿಗೆ ಇನ್ನು ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆಗಳಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರು,  ಮೀನುಗಾರರು, ದನ ಕರು ಮೇಯಿಸುವವರು ಮುಂಜಾಗ್ರತೆ ವಹಿಸಿ,  ಸೂಕ್ತ ಸ್ಥಳಕ್ಕೆ ತೆರಳಬೇಕೆಂದು ಮನವಿ ಮಾಡಿದರು.

news-details