ಹೊಸೂರು:ಕಾಫಿತೋಟಗಳ ಲೈನ್‌ಮನೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ಒದಗಿಸುವಂತೆ ಆಗ್ರಹಿಸಿ, ಬುಡಕಟ್ಟು ಕಾರ್ಮಿಕರ ಸಂಘ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ವತಿಯಿಂದ ಪೊನ್ನಂಪೇಟೆ ತಾಲೂಕಿನ ಹೊಸೂರು ಗ್ರಾಮ ಪಂಚಾಯ್ತಿ ಕಚೇರಿ ಎದುರು ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಹನ್ನೇರಡನೇ ದಿನಕ್ಕೆ ಕಾಲಿರಿಸಿದೆ
ತಲೆ ಮೇಲೊಂದು ಸೂರಿಗೆ ಆಗ್ರಹಿಸಿ, ಮಳೆಯ ನಡುವೆಯೇ ಚಿಕ್ಕಮಕ್ಕಳನ್ನು ಎತ್ತಿಕೊಂಡು ಮಹಿಳೆಯರು, ಪುರುಷರು ನಿರಂತರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ತಲೆಯ ಮೇಲೊಂದು ಸೂರಿಗಾಗಿ ಆಗ್ರಹಿಸಿದರು.
ಈ ಸಂದರ್ಭ ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ಗಪ್ಪು ಅವರು ಮಾತನಾಡಿ, ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡುವಿನಲ್ಲಿ ನಿವೇಶನ ರಹಿತರಿಗೆ ವಿತರಿಸಲು ಭೂಮಿ ಲಭ್ಯವಿದ್ದು, ಈ ಭೂಮಿಯನ್ನು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೈನ್ ಮನೆಯಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳಿಗೆ ನೀಡಬೇಕೆಂದು ಒತ್ತಾಯಿಸಿದರು
ಬುಡಕಟ್ಟು ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೇಮ ಅವರು ಮಾತನಾಡಿ, ಕಾಡಿನ ಪ್ರಾಣಿಗಳಿಗೆ ಬದುಕುವ ಹಕ್ಕಿದೆ. ಆಕಾಶದಲ್ಲಿ ಹಾರುವ ಹಕ್ಕಿಗಳಿಗೆ ಬದುಕುವ ಹಕ್ಕಿದೆ ಆದರೆ ಕಾವೇರಮ್ಮನ ನೆಲದಲ್ಲಿ ಹುಟ್ಟಿದ ನಮಗೆ ಬದುಕುವ ಹಕ್ಕಿಲ್ಲವೇ ಎಂದು ತೀಕ್ಷ÷್ಣವಾಗಿ ನುಡಿದರು.
ಕಾಫಿತೋಟಗಳಲ್ಲಿ ರಕ್ತ ಬಸಿದು ಬದುಕು ದೂಡುತ್ತಿರುವ ನಾವು ಕೂಡಾ ಮನುಷ್ಯರೇ ನಮಗೂ ಬದುಕುವ ಹಕ್ಕಿದೆ ಓಟಿಗಾಗಿ ನಾವು ಬೇಕು, ಆದ್ರೆ ಅಂಗೈ ಅಗಲ ಜಾಗ ನೀಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಬುಡಕಟ್ಟು ಸಮುದಾಯಗಳ ಕುಟುಂಬದ ನಿವೇಶನದ ಬೇಡಿಕೆಗಳ ಬಗ್ಗೆ ಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಧು ಪ್ರತಿಕ್ರಿಯಿಸಿದ್ದು ಹೀಗೆ.
ನಿವೇಶನದ ಹಕ್ಕುಪತ್ರಕ್ಕಾಗಿ ಆಗ್ರಹಿಸಿ, ಬುಡಕಟ್ಟು ಸಮುದಾಯಗಳ ಕುಟುಂಬಗಳು ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಹನ್ನೇರಡನೇ ದಿನಕ್ಕೆ ಕಾಲಿರಿಸಿದೆ.