ಹೆಚ್.ಡಿ.ಕೋಟೆ: ಕಬಿನಿ ಜಲಾಶಯ ಭರ್ತಿಯಾಗಲು ಒಂದು ಅಡಿ ಮಾತ್ರ ಬಾಕಿ ಇದ್ದು, ಜಲಾಶಯಕ್ಕೆ 5500 ಕ್ಯೂಸೆಕ್ ಒಳಹರಿವು ಹಿನ್ನೆಲೆಯಲ್ಲಿ, ಜಲಾಶಯದ ಭದ್ರತಾ ಹಿತದೃಷ್ಟಿಯಿಂದ ಮೇಲಾಧಿಕಾರಿಗಳ ಆದೇಶದ ಮೇರೆಗೆ ಶುಭಾಷ್ ಕಬಿನಿ ಪವರ್ ಪ್ರಾಜೆಕ್ಟ್ ನಿಂದ 3 ಸಾವಿರ ಕ್ಯೂಸೆಕ್ ಹಾಗೂ ಜಲಾಶಯದ ಮುಖ್ಯ ಎರಡು ಗೇಟ್ ಗಳಿಂದ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಕಬಿನಿ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ತಿಳಿಸಿದ್ದಾರೆ. ಶುಕ್ರವಾರದ ಕಬಿನಿ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ 22 84 ಅಡಿಗಳಿದ್ದು., ಇಂದಿನ ಮಟ್ಟ 22 83 ಅಡಿಗಳಾಗಿದ್ದು, ಒಳ ಹರಿವು 5500 ಕ್ಯೂ ಸೆಕ್ ಹಾಗೂ ಹೊರಹರಿವು 5 ಸಾವಿರ ಕ್ಯೂ ಸೆಕ್‌ಗಳಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಲಾಶಯದ ಬಳಿ ವಾಸ್ತವ್ಯ ಹೂಡಿದ್ದಾರೆ.