ಮಡಿಕೇರಿ
ಬಡವರಿಗೆ ಸೈಟ್ ನೀಡಲು ಹುಟ್ಟು ಹಾಕಿದ್ದ ಮೂಡ ಇದೀಗ ಶ್ರೀಮಂತರಿಗೆ ಸೈಟ್ ನೀಡುವ ಸಂಸ್ಥೆಯಾಗಿ ಮಾರ್ಪಟ್ಟಿದೆ. ಅಲ್ಲಿ ನಡೆದಿರುವ ಹಗರಣದಿಂದ ಜನರಿಗೆ ತೊಂದರೆಯಾಗುತ್ತಿದ್ದು, ಈ ಪ್ರಕರಣದ ಮುಕ್ತ ತನಿಖೆಗಾಗಿ ಸಿಬಿಐಗೆ ವಹಿಸಬೇಕೆಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಗ್ರಹಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ವಾಲ್ಮಿಖಿ ನಿಗಮ ಸಹಿತ ಮೂಡ ಸೈಟ್ ಹಗರಣಗಳು ರಾಜ್ಯ ಸರಕಾರದ ಅತ್ಯಂತ ಗಂಭೀರ ಪ್ರಕರಣಗಳಾಗಿವೆ. ರಾಜ್ಯ ಸರಕಾರದ ಆಡಳಿತ ವೈಫಲ್ಯಗಳಿಂದ ಇಂತಹ ಹಗರಣಗಳು ನಡೆಯಲು ಕಾರಣವಾಗಿವೆ ಎಂದು ಹೇಳಿದರು. ಈ ಬಗ್ಗೆ ಪಕ್ಷದ ವತಿಯಿಂದ ಹೇಳಿಕೆಗಳ ಸಹಿತ ಪ್ರತಿಭಟನೆಗಳನ್ನು ಕೂಡ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಹಗರಣದ ಮುಕ್ತ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಹಕ್ಕು ಪತ್ರ ವಿತರಣೆ, ಬಿಎಸ್‌ಎನ್‌ಎಲ್ ಟವರ್‌ಗಳನ್ನು ‘4ಜಿ’ ಆಗಿ ಮಾರ್ಪಡಿಸುವಂತೆ ಸಾರ್ವಜನಿಕರಿಂದ ಮನವಿಗಳು ಬಂದಿವೆ. ಈ ಕುರಿತು ಸಂಬAಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷದ ಕುರಿತು ವನ್ಯ ಜೀವಿ ತಜ್ಞರು, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಶಾಶ್ವತ ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು. ಈಗಾಗಲೇ ಮೈಸೂರು-ಕುಶಾಲನಗರ ರಾಷ್ಟಿçÃಯ ಹೆದ್ದಾರಿ ಯೋಜನೆಗೆ ಅನುದೋದನೆ ದೊರಕಿದೆ. ಅದರೊಂದಿಗೆ ಬೆಳಗೊಳ-ಕುಶಾಲನಗರ ರೈಲ್ವೇ ಯೋಜನೆಯ ಡಿಪಿಆರ್ ಸಿದ್ದವಾಗಿದ್ದು, ಕೇಂದ್ರದ ಬಳಿ ಇದೆ. ಬಹುಪಥ ಹೆದ್ದಾರಿ ಯೋಜನೆಯ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಸದ್ಯದಲ್ಲೇ ಯೋಜನೆ ಅನುಷ್ಟಾನಕ್ಕೆ ಬರಲಿದೆ. ರೈಲ್ವೇ ಯೋಜನೆ ಸಹಿತ ಕೇಂದ್ರ ಸರಕಾರದ ಗ್ರಾಮ ಸಡಕ್ ಯೋಜನೆಗಳನ್ನು ಕೂಡ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹಾಜರಿದ್ದರು.