Breaking News
   
   
   

ಕುಶಾಲನಗರ ಬಳಿಯ ಬೈಚನಹಳ್ಳಿಯಲ್ಲಿದ್ದ ಸ್ಮಶಾನದ ಜಾಗವನ್ನು ನಿರ್ದಿಷ್ಟ ಸಮುದಾಯವೊಂದರ ಹೆಸರಿನಲ್ಲಿ ಕಾಯ್ದಿರಿಸಿರುವ ಕ್ರಮವನ್ನು ಖಂಡಿಸಿ, ಗ್ರಾಮಸ್ಥರ ಪ್ರತಿಭಟನೆ

ಕೊಡಗು

news-details

ಕುಶಾಲನಗರ

ಮೂರು ತಲೆಮಾರುಗಳಿಂದ ಬೈಚನಹಳ್ಳಿ ಗ್ರಾಮಸ್ಥರು ಅಂತ್ಯಕ್ರಿಯೆ ಬಳಸುತ್ತಿದ್ದ ಸ್ಮಶಾನ ಜಾಗವನ್ನು ನಿರ್ದಿಷ್ಟ ಸಮುದಾಯವೊಂದರ ಹೆಸರಿನಲ್ಲಿ ಕಾಯ್ದಿರಿಸಿರುವ ಕ್ರಮವನ್ನು ಖಂಡಿಸಿ, ಕುಶಾಲನಗರ ಬಳಿಯ ಬೈಚನಹಳ್ಳಿ ಗ್ರಾಮಸ್ಥರು ಸ್ಮಶಾನ ಮುಂಭಾಗ ಕುಳಿತು ಪ್ರತಿಭಟಿಸಿದ ಘಟನೆ ನಡೆಯಿತು. ಬೈಚನಹಳ್ಳಿ ಗೆಳೆಯರ ಬಳಗದ ನೇತೃತ್ವದಲ್ಲಿ ಗ್ರಾಮಸ್ಥರು ಸ್ಮಶಾನ ಮುಂದೆ ಪ್ರತಿಭಟನೆ ನಡೆಸಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು  ಕೂಗಿ, ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ವಿಷಲ್ ಪ್ಲೋ-
ಈ ಸಂದರ್ಭ ಮಾತನಾಡಿದ ಗೆಳೆಯರ ಬಳಗದ ಅಧ್ಯಕ್ಷ ಶ್ರೀಕಾಂತ್ ಹಾಗೂ ಪುರಸಭೆ ಸದಸ್ಯ ಬಿ.ಎಲ್.ಜಗದೀಶ್,  ಸರ್ವಜನಾಂಗದವರು ಬಳಸುತ್ತಿದ್ದ ಸ್ಮಶಾನವನ್ನು ನಿರ್ದಿಷ್ಟ ಸಮುದಾಯಕ್ಕೆಂದು ಮೀಸಲಿಟ್ಟಿರುವುದಕ್ಕೆ ನಮ್ಮ ವಿರೋಧವಿದೆ. ಈ ಎಲ್ಲಾ ಕಾರಣಗಳಿಂದ ನಮ್ಮ ಗ್ರಾಮದ ಸ್ಮಶಾನವನ್ನು ಬೇರೆ ಸಮುದಾಯಕ್ಕೆ ಬಿಟ್ಟು ಕೊಡುವ ಮಾತೇ ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪುರಸಭೆ ಸದಸ್ಯ ಅಮೃತ್ ರಾಜ್ ಮಾತನಾಡಿ, ಕೆಲವು ಕಾಣದ ಕೈಗಳು ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಈ ಸಾರ್ವಜನಿಕ ಸ್ಮಶಾನವನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ. ಎಂದರು.

ಪ್ರತಿಭಟನೆ ಸ್ಥಳಕ್ಕೆ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಆಗಮಿಸಿ ಪ್ರತಿಭಟನೆ ನಿರತರ ಜೊತೆಯಲ್ಲಿ ಮಾತನಾಡಿ, ಸದ್ಯಕ್ಕೆ ಇದೆ ಸ್ಥಿತಿಯಲ್ಲಿ ಸಾರ್ವಜನಿಕ ಸ್ಮಶಾನ ಮುಂದುವರೆಯಲಿ. ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಗ್ರಾಮಸ್ಥರ ಪರವಾಗಿ ಕಾನೂನು ರೀತಿಯಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದುಕೊAಡರು. ಪ್ರತಿಭಟನೆಯಲ್ಲಿ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ.ಎA.ಚರಣ್, ಜಿಲ್ಲಾ ಪಂಚಾಯ್ತಿ  ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್, ಪುರಸಭಾ ಸದಸ್ಯ ಕೆ.ಜಿ.ಮನು,  ಬೈಚನಹಳ್ಳಿ ಗ್ರಾಮದ ಶಿವಕುಮಾರ್, ಗಣೇಶ್, ಉಮೇಶ್, ಮಣಿ, ಸಂತೋಷ್, ಯೋಗೇಶ್ ಮತ್ತಿತರರು ಇದ್ದರು.
 

news-details