ಚೆಯ್ಯ0ಡಾಣೆಯಲ್ಲಿ ಕಾಡಾನೆ ಹಾವಳಿ ಹಾಗೂ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ನಾಪೋಕ್ಲು ವಿರಾಜಪೇಟೆ ಮುಖ್ಯ ರಸ್ತೆಯನ್ನು ತಡೆಯಲು ಪ್ರಯತ್ನಿಸಿದ ಪ್ರತಿಭಟಣಾಕಾರರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅರಣ್ಯಧಿಕಾರಿ ಡಿ ಎಫ್ ಒ ಜಗನ್ನಾಥ್ ಹಾಗೂ ಚೆಸ್ಕಾಂ ಅಧಿಕಾರಿ ಸಂಪತ್ ಹಾಗೂ ಜೆ ಇ ಚಿತ್ರೇಶ್
ಸಮಸ್ಯೆ ಪರಿಹರಿಸಲು 15 ದಿನದ ಗಡುವು
ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ,ಕೋಕೇರಿ, ಚೇಲಾವರ,ಕರಡ,ಅರಪಟ್ಟು,ಪೋದವಾಡ,ಮರಂದೋಡ,ಕಕ್ಕಬೆ ಗ್ರಾಮಸ್ಥರು ಚೆಯ್ಯ0ಡಾಣೆ ಪಟ್ಟಣದಲ್ಲಿ ನಾಪೋಕ್ಲು ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಉಗ್ರಹೊರಾಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ತೋಟಗಳಿಗೆ ಲಗ್ಗೆ ಇಟ್ಟು ಪಸಲು ಬರಿತಾ ಕಾಫಿ,ಬಾಳೆ,ಅಡಿಕೆ, ಒಳ್ಳೆಮೆಣಸು,ತೆಂಗು ಗಿಡಗಳನ್ನು ತುಳಿದು ಸರ್ವನಾಶ ಪಡಿಸಿದೆ.ತೋಟಗಳನ್ನು ಗದ್ದೆ ರೀತಿಯಲ್ಲಿ ಮಾರ್ಪಟು ಮಾಡಿದೆ.
ಮನೆಯ ಅಂಗಳಕ್ಕೆ ಕೂಡ ಆಗಮಿಸುತ್ತಿದ್ದು ಕಳೆದ ವರ್ಷ ಚೇಲಾವರದಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅದೃಷ್ಟ ವಶಾತ್ ಪ್ರಾಣ ಪಾಯದಿಂದ ಪಾರಾಗಿದ್ದಾರೆ.ಕಳೆದ ಕೆಲವು ತಿಂಗಳುಗಳ ಹಿಂದೆ ಕುಂಜಿಲ ಕಕ್ಕಬೆ ಪಂಚಾಯಿತಿಯ ರಾಜ ದೇವಯ್ಯ ಎಂಬವರನ್ನು ಕಾಡಾನೆ ತುಳಿದು ಕೊಂದು ಹಾಕಿದ್ದು,
ಕಕ್ಕಬೆಯಲ್ಲಿ ಮನೆಯ ಸಮೀಪ ನಿಲ್ಲಿಸಿದ ಆಟೋ ರಿಕ್ಷಾವನ್ನು ಮೊಗಚಿ ಹಾಕಿ ಹಾನಿಪಡಿಸಿದೆ. ಹಲವಾರು ಮನೆ ಹಾಗೂ ತೋಟಕ್ಕೆ ತೆರಳುವ ಗೇಟ್ ಗಳನ್ನು ಹಾನಿಪಡಿಸಿದೆ ಸರಿ ಸುಮಾರು 70 ರಿಂದ 80 ಕ್ಕೂ ಹೆಚ್ಚು ಕಾಡಾನೆ ಈ ವ್ಯಾಪ್ತಿಯಲ್ಲಿ ನಿರಂತರ ದಾಳಿ ನಡೆಸುತ್ತಿದೆ ಆದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಹಾಗೂ
ನಿರಂತರ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ,ವಾರದಲ್ಲಿ 3,4 ದಿನ ವಿದ್ಯುತ್ ಇರಲ್ಲ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ,ವ್ಯಾಪಾರಿಗಳಿಗೆ,ಇಂಟರ್ನೆಟ್ ಬಳಕೆದಾರರಿಗೆ ವಿದ್ಯುತ್ ಸಮಸ್ಯೆಯಾಗಿ ಪರಿಣಮಿಸಿದೆ, ವಿದ್ಯುತ್ ಇಲ್ಲದಿದ್ದರೆ ಈ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲ ಎಂದು
ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ರಸ್ತೆಗೆ ಇಳಿದು ರಸ್ತೆ ತಡೆ ನಡೆಸಿ ಉಗ್ರಪ್ರತಿಭಟನೆಗೆ ಮುಂದಾದ ಘಟನೆ ಇಂದು ಚೆಯ್ಯಂಡಾಣೆಯಲ್ಲಿ ನಡೆಯಿತು.
ಮಡಿಕೇರಿ ತಾಲೂಕು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಮಾಡಿ ಯಾವುದೇ ಕಾರಣಕ್ಕೆ ರಸ್ತೆ ತಡೆ ಮಾಡಬೇಡಿ ಅಂದರು ಅದಕ್ಕೆ ಸ್ವಂದಿಸಿದ ಪ್ರತಿಭಟನಕಾರರು
10 ಗಂಟೆಯಿಂದ ರಸ್ತೆ ತಡೆಮಾಡಲು ನಿರತರಾಗಿದ್ದ ಸಂದರ್ಭ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗು ಚೆಸ್ಕಾಂ ಇಲಾಖೆಗೆ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರೂ.ನಂತರ ರಸ್ತೆ ತಡೆ ಕೈಬಿಟ್ಟರು.ಕೂಡಲೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.
ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಪ್ರತಿಭಟನಾ ನೇತೃತ್ವ ವಹಿಸಿ ಮಾತನಾಡಿ ಕಳೆದ ವರ್ಷ ಇದೆ ಜಾಗದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಕೂಡಲೇ ಆನೆಗಳನ್ನು ಹಿಡಿಯುವ ಅಶ್ವಾಸನೆ ಕೊಟ್ಟು ತೆರಳಿದ ಅರಣ್ಯಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ,ಅಶ್ವಾಸನೆ ಕೊಟ್ಟದರಲ್ಲಿ ಎಷ್ಟು ಆನೆಯನ್ನು ಹಿಡಿದ್ದಿದಿರಾ ಎಂದು ಪ್ರಶ್ನಿಸಿದರು,ಕಳೆದ ವಾರ ಕರಡ ವ್ಯಾಪ್ತಿಯಲ್ಲಿ ಕಾಡಾನೆಯನ್ನು ಓಡಿಸಿದ್ದೀರಾ ಅದನ್ನು ಎಲ್ಲಿಗೆ ಒಡಿಸಿದ್ದೀರಾ?, ಕಳೆದ ಬಾರಿ ಪ್ರತಿಭಟನೆ ಮಾಡಿದ ಸಂದರ್ಭ ಕಾಡಾನೆಯನ್ನು ಓಡಿಸಬೇಡಿ ಓಡಿಸಿದರೆ ಅದು ಕರಡದಿಂದ ಓಡಿಸುವಾಗ ನರಿಯಂದಡ, ನರಿಯಂದಡದಿಂದ ಓಡಿಸುವಾಗ ಕೊಕೇರಿ,ಅಲ್ಲಿಂದ ಓಡಿಸುವಾಗ ಮರಂದೋಡಕ್ಕೆ ಲಗ್ಗೆ ಹಿಡುತ್ತದೆ,
ಬೆಳ್ಳಗಿನ ಸಮಯದಲ್ಲಿ ಕಾಡಾನೆ ಪಟ್ಟಣದಲ್ಲಿ ರಾಜ ರೋಷವಾಗಿ ತಿರುಗುತ್ತಿದೆ,ಒಂದು ವರ್ಷದಿಂದ ನೀವುಗಳು ಪ್ರಸ್ತಾವನೆಯಲ್ಲೇ ಕಾಲ ಕಳೆಯುತ್ತಿದ್ದು ಪ್ರಸ್ತಾವನೆ ನಮಗೆ ಬೇಡ, ಇಲ್ಲಿ ಯಾರನ್ನಾದರು ಬಲಿ ಪಡೆದ ನಂತರ ನೀವು ಪ್ರಸ್ತಾವನೆ ಸಲಿಸುತ್ತೀರಾ ಎಂದು ಕಟುವಾಗಿ ಮಾತನಾಡಿದರು,ಕಾರ್ಮಿಕರಿಗೆ ತೋಟಕ್ಕೆ ತೆರಳಲು ಭಯ ಕೂಡಲೇ ಕಾಡಾನೆಯನ್ನು ಸೆರೆ ಹಿಡಿಯಿರಿ 15 ದಿನಗಳ ಗಡುವು ನೀಡುತ್ತಿದ್ದೇವೆ ಅದರಲ್ಲಿ ಸ್ವಂದನೆ ದೋರೆಯದಿದಲ್ಲಿ ಹೈ ಕೋರ್ಟ್ ಗೆ ಹೋಗಲು ತಯಾರಿನಲ್ಲಿದ್ದೇವೆ ಹಾಗೂ ಮತೊಮ್ಮೆ ಉಗ್ರಹೋರಾಟ ನಡೆಸಲಾಗುವುದು ಎಂದರು.
ನರಿಯಂದಡ ಗ್ರಾಮಸ್ಥ ಪೋಕ್ಕುಳಂಡ್ರ ದನೋಜ್ ಮಾತನಾಡಿ ನಮ್ಮ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಆನೆಗಳು ತೋಟಗಳಲ್ಲಿ ದಾಂದಲೆ ನಡೆಸುತ್ತಿದೆ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಆನೆಗಳು ತುಳಿದು ನಾಶಪಡಿಸುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ತನ್ನ ಜೀವನೋಪಾಯಕ್ಕೆ ಬೆಳೆದ ಬೆಳೆಗಳು ಆನೆಗಳ ಉಪಟಳದಿಂದ ನಾಶವಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಆನೆಗಳ ನಿಯಂತ್ರಣಕ್ಕೆ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದರು ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ಸರ್ಕಾರವೇ ಮಧ್ಯಪ್ರವೇಶಿಸಿ ಇದಕ್ಕೆ ನಾಂದಿ ಆಡಬೇಕಾಗಿದೆ ಎಂದರು.
ಕೊಕೇರಿ ಗ್ರಾಮಸ್ಥೆ ಮಚ್ಚಂಡ ಸುಮತಿ ಮಾತನಾಡಿ ತೋಟಗಳಲ್ಲಿ ಆನೆಗಳ ಉಪಟಳದಿಂದ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವ ಪರಿಸ್ಥಿತಿ ಉಂಟಾಗಿದೆ.ಮನೆಯ ಸಮೀಪವಿದ್ದ ದೇವರ ಕಲ್ಲನ್ನು ತುಳಿದು ಹಾನಿಪಡಿಸಿದೆ, ತೋಟಗಳಲ್ಲಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಕಾಡಾನೆಗಳ ನಿಯಂತ್ರಣಕ್ಕೆ ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಕಕ್ಕಬೆ ಯುವಕಪಾಡಿ ಗ್ರಾಮಸ್ಥ ಅಂಜಪರವಂಡ ಕುಶಾಲಪ್ಪ ಮಾತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುವಂತ್ತಾಗಿದೆ. ಮರಂದೋಡ ಮತ್ತು ಯುವಕಪಾಡಿ ಎರಡು ಗ್ರಾಮಗಳನ್ನು ವಿಭಜಿಸುವ ಒಂದು ರಸ್ತೆ ಇದ್ದು ಕಾಡಾನೆಗಳು ಇರುವ ಬಗ್ಗೆ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದರೆ ಅಧಿಕಾರಿಗಳು ಬರುವಷ್ಟರಲ್ಲಿ ಕಾಡಾನೆಗಳು ಗ್ರಾಮವನ್ನು ವಿಭಜಿಸುವ ರಸ್ತೆಯ ಒಂದು ಬದಿಯ ತೋಟದಲ್ಲಿದ್ದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಇಲಾಖೆಯ ಅಧಿಕಾರಿಗಳು ಹೇಳಿಕೆ ಕೊಟ್ಟು ಹಿಂಜರಿಯುತ್ತಿದ್ದಾರೆ. ಇದರಿಂದ ಕಷ್ಟಪಟ್ಟು ಬೆಳೆದ ರೈತರ ಫಸಲುಗಳು ನಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ. ಅಧಿಕಾರಿಗಳ ಇಂತಹ ನಿರ್ಲಕ್ಷತನ ನಿಲ್ಲಬೇಕು. ರೈತರ ತೋಟಗಳಲ್ಲಿರುವ ಮರಗಳನ್ನು ಸ್ವಂತ ಕೆಲಸಕ್ಕೆ ಕಡಿಯಬೇಕಾದರೆ ಅಧಿಕಾರಿಗಳಿಗೆ ಯಾವುದೇ ರೇಂಜ್ ಇಲ್ಲ ಸ್ಥಳಕ್ಕೆ ಬಂದು ರೈತನಿಂದ ಹಣ ವಸೂಲಿ ಮಾಡಿ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮಗೆ ಗುಂಡು ಹೊಡೆಯಲು ಅವಕಾಶ ಕೊಡಿ ನಾವು ಆನೆ ಹಾವಳಿ ತಡೆಗಟ್ಟಿ ತೋರಿಸಿಕೊಡುತೇವೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಕೋಕೇರಿ ಗ್ರಾಮದ ಚೇನಂಡ ಸಂಪತ್,ನರಿಯಂದಡ ಗ್ರಾಮದ ಬಟ್ಟಿಯಂಡ ಜಯರಾಂ,ಅಶೋಕ್,ಚೇಲಾವರದತಮ್ಮಯ್ಯ ಮತ್ತಿತರರು, ಪ್ರತಿಭಟನೆಯನ್ನು ಉದ್ದೇಶೀಸಿ ಮಾತನಾಡಿ ಒಂದು ಕಡೆ ಆನೆ ಹಾವಳಿ ಮತ್ತೊಂಡೆದೆ ವಿದ್ಯುತ್ ಸಮಸ್ಯೆ ಇವೆರಡನ್ನು ಕೂಡಲೇ ಪರಿಹರಿಸಬೇಕು ಇಲ್ಲ ಮುಂದೊಂದು ದಿನ ಅಹೋ ರಾತ್ರಿ ಪ್ರತಿಭಟನೆ ನಡೆಸಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಅಧಿಕಾರಿಗಳ ತಂಡ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ತಾಲೂಕು ಅರಣ್ಯಧಿಕಾರಿ ಡಿ ಎಫ್ ಒ ಜಗನ್ನಾಥ್ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗಿರುವುದರಿಂದ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ವ್ಯಾಪ್ತಿಯ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತಕ್ಷಣವೇ ಇಲಾಖೆಯಿಂದ ತಂಡಗಳನ್ನು ನೇಮಿಸಿ ಕ್ರಮ ಕೈಗೊಳ್ಳಲಾಗುವುದು. ಗದ್ದೆಗಳಲ್ಲಿ ಕೃಷಿ ಚಟುವಟಿಕೆ ನಡೆಸುವವರು ಸೋಲಾರ್ ಫೆನ್ಸಿಂಗ್ ಮಾಡಲು ಇಲಾಖೆಯಿಂದ ಅವಕಾಶವಿದ್ದು ಪ್ರಸ್ತಾವನೆಯನ್ನು ಸಲ್ಲಿಸಿದರೆ ಅನುದಾನ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ವ್ಯಾಪ್ತಿಯಲ್ಲಿರುವ 5 ಆನೆಗಳನ್ನು ಸೆರೆ ಹಿಡಿಯಲು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ಕೂಡಲೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿರಾಜಪೇಟೆ ವಲಯ ಅರಣ್ಯಧಿಕಾರಿ ಕಳ್ಳಿರ ದೇವಯ್ಯ ಮಾತನಾಡಿ ಇಲ್ಲಿರುವ ಆನೆಗಳ ನಿಯಂತ್ರಣಕ್ಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ 50 ಆನೆಗಳಿರುವ ಬಗ್ಗೆ ಶಾಸಕರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಈಗ ಐದು ಆನೆಗಳನ್ನು ಸೆರೆ ಹಿಡಿಯಲು ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಕಾರ್ಯಾಚರಣೆ ನಡೆಸುತ್ತೇವೆ. ಈ ಭಾಗದ ಕೃಷಿಕರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ನಮ್ಮ ಗಮನಕ್ಕೆ ತನ್ನಿ ನಾವು ಗನ್ ಮ್ಯಾನ್ ಗಳನ್ನು ಕಳುಹಿಸಿ ಕೊಡುವ ವ್ಯವಸ್ಥೆಗಳನ್ನು ಮಾಡುತ್ತೇವೆ ಎಂದರು.
ಚೆಸ್ಕಾಂನ ಅಧಿಕಾರಿ
ಮೂರ್ನಾಡು ಚೆಸ್ಕಾಂ ಅಧಿಕಾರಿ ಸಂಪತ್ ಮಾತನಾಡಿ ಕೂಡಲೇ ಈ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಕೊಡಲಾಗುವುದು ನೂತನ ಖಾಯಂ ಜೆ.ಇ.ಚಿತ್ರೇಶ್ ಅಧಿಕಾರ ವಹಿಸಿಕೊಂಡಿದ್ದಾರೆ, ಹಾಗೂ ಚೆಯ್ಯಂಡಾಣೆಗೆ ಕೂಡಲೇ ಖಾಯಂ ಲೈನ್ ಮ್ಯಾನ್ ನಿಯೋಜಿಸಲಾವುದು,ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಕ್ರಮ ಕೈಗೊಂಡು ಎಲ್ಲಾ ಸಮಸ್ಯೆ ಪರಿಹರಿಸಿ ಕೊಡುವ ಭರವಸೆ ನೀಡಿದರು.
ಈ ಸಂದರ್ಭ ನರಿಯಂದಡ,ಕೋಕೇರಿ, ಚೇಲಾವರ,ಮರಂದೋಡ, ಕರಡ ಅರಪ್ಪಟ್ಟು,ಪೊದವಾಡ ಗ್ರಾಮಸ್ಥರು,2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು,ಗ್ರಾಮ ಪಂಚಾಯಿತಿ ಸದಸ್ಯರು,7 ಗ್ರಾಮಕ್ಕೆ ಒಳಪಟ್ಟ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.ವಿರಾಜಪೇಟೆ ಅರಣ್ಯಧಿಕಾರಿ ಎಸಿಎಫ್ ನೆಹರು,ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ,ಚೆಸ್ಕಾಂ ಜೆ.ಇ. ಚಿತ್ರೇಶ್,ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ವೃತ ನಿರೀಕ್ಷಿಕ ಅನೂಪ್ ಮಾದಪ್ಪ ನಿರ್ದೇಶದಂತೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಶ್ರಫ್